ಮಂಗಳವಾರ, ಮಾರ್ಚ್ 2, 2021
29 °C

ಪತಿಯಿಂದ ರಕ್ಷಣೆ ನೀಡುವಂತೆ ಆಗ್ರಹ: ಬಿಸಿಲಲ್ಲಿ 15 ಕಿ.ಮೀ ನಡೆದು ಬಂದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಪತಿ ತನಗೆ ಜೀವ ಬೆದರಿಕೆ ಒಡ್ಡಿದ್ದು ಆತನಿಂದ ರಕ್ಷಣೆ ನೀಡುವಂತೆ  ಮಹಿಳೆಯೊಬ್ಬರು ಲಾಕ್ ಡೌನ್ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಸುಗೂಸಿನೊಂದಿಗೆ 15 ಕಿ.ಮೀ ನಡೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ತಮನಾಳ ಗ್ರಾಮದಿಂದ ಉರಿ ಬಿಸಿಲಲ್ಲಿ ಗೃಹಿಣಿ ಅಶ್ವಿನಿ ನಡೆದುಬಂದು ಬಾದಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏಳು ವಷ೯ಗಳ ಹಿಂದೆ ಪತಿ ದೇವರಾಜ್ ಅವರನ್ನು ಪ್ರೀತಿಸಿ ಅಶ್ವಿನಿ ಅಂತಜಾ೯ತಿ ವಿವಾಹವಾಗಿದ್ದರು.

ಇದೀಗ ಪತಿ ದೇವರಾಜ್ ಎರಡನೇ ಮದುವೆಯಾಗಿದ್ದು, ಆ ಬಗ್ಗೆ ಅಶ್ವಿನಿ ಈ ಮೊದಲು ಪೊಲೀಸರಿಗೆ ದೂರು ನೀಡಿದ್ದರು.

ನಂತರ ಪೊಲೀಸರು ದೇವರಾಜ ಅವರನ್ನು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಹೊರ ಬಂದಿರುವ ಪತಿಯಿಂದ ಮಗುವಿಗೆ ಮತ್ತು ತನಗೆ ಜೀವ ಬೆದರಿಕೆ ಇದೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ಆಗ್ರಹಿಸಿ ತಮನಾಳದಿಂದ ಬಾದಾಮಿವರೆಗೆ ನಡೆದುಕೊಂಡು ಬಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು