ಮಂಗಳವಾರ, ಜನವರಿ 18, 2022
27 °C

ಪ್ರಜಾವಾಣಿ ಸಾಧಕರು; ಗಿಡ–ಮರಗಳ ದಾಹ ನೀಗಿಸುವ ಕೈಂಕರ್ಯ

ವೆಂಕಟೇಶ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಬಾದಾಮಿ ತಾ ಲ್ಲೂಕಿನ ಚೊಳಚಗುಡ್ಡ  ಗ್ರಾಮದ ಕೃಷಿಕ ಮತ್ತು ಉದ್ಯಮಿ  ರಮೇಶ ಹಾದಿಮನಿ  ತಮ್ಮ ಬಿಡುವಿನ ಸಮಯದಲ್ಲಿ ಸಾ ಮಾಜಿಕ  ಮತ್ತುಪರಿಸರ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಮೇಶ ಹಾದಿಮನಿ ಬಾದಾಮಿ ಪಟ್ಟಣದ ಬನಶಂಕರಿ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಜೊತೆಗೆ ತಮ್ಮೂರಿನಲ್ಲಿ ಕೃಷಿ ಕಾರ್ಯದಲ್ಲೂ ತೊಡಗಿದ್ದಾರೆ. ಅದರ ಮಧ್ಯೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಉಮೇದು ಹೊಂದಿದ್ದಾರೆ. ಅದಕ್ಕಾಗಿ ಅರಣ್ಯ ಇಲಾಖೆಯವರು ರಸ್ತೆ ಪಕ್ಕದಲ್ಲಿ ನೆಟ್ಟ ಗಿಡಗಳಿಗೆ ಬೇಸಿಗೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನೀರು ಹಾಕುತ್ತಾರೆ.

ಬಾಗಲಕೋಟೆ ಜಿಲ್ಲೆ ಹೇಳಿಕೇಳಿ ಬೇಸಿಗೆಯಲ್ಲಿ ಬಿರು ಬಿಸಿಲಿನಿಂದ ಕೂಡಿ ಕಾದ ಹೆಂಚಿನಂತಾಗಿರುತ್ತದೆ. ಈ ವೇಳೆ ಪ್ರಾಣಿ–ಪಕ್ಷಿ, ಗಿಡ–ಮರಗಳು ದಾಹದಿಂದ ಬಳಲುತ್ತಿರುತ್ತವೆ. ಈ ವೇಳೆ ಅವುಗಳ ದಾಹ ಇಂಗಿಸುವ ಕೈಂಕರ್ಯ ರಮೇಶ ಮಾಡುತ್ತಿದ್ದಾರೆ. 2016ರಿಂದ ಈ ಕೆಲಸದಲ್ಲಿ ತೊಡಗಿರುವ ರಮೇಶ ನಿತ್ಯ ಆರು ಟ್ಯಾಂಕರ್‌ಗಳಲ್ಲಿ ಸತತ ಎರಡು ತಿಂಗಳು ತಮ್ಮೂರಿನ ಸುತ್ತಲಿನ 30 ಕಿ.ಮೀ ವ್ಯಾಪ್ತಿಯಲ್ಲಿರುವ ಗಿಡ–ಮರಗಳಿಗೆ ನೀರು ಹಾಕಿಸುತ್ತಾರೆ. ಅದಕ್ಕಾಗಿ ಈ ಅವಧಿಯಲ್ಲಿ ಕೆಲಸಗಾರರನ್ನು ನೇಮಿಸುತ್ತಾರೆ.

‘ನಾವು ಜನಿಸಿದ್ದು ಆಕಸ್ಮಿಕ. ನಾಡಿಗೆ, ದೇಶಕ್ಕೆ ಏನಾದರೂ ಉತ್ತಮ ಸೇವೆ ಸಲ್ಲಿಸಿ ಸಮಾಜದ ಋಣ  ತೀರಿಸಬೇಕು ‘ ಎಂಬ ಮಹದಾಸೆಯಿಂದ ಈ ಕಾರ್ಯದಲ್ಲಿ ತೊಡಗಿರುವೆ ಎನ್ನುವ ರಮೇಶ ಹಾದಿಮನಿ, ತಾಲ್ಲೂಕಿ ನಲ್ಲಿ ಮೇಲಿಂ ದ ಮೇಲೆ ಬರುವ  ಮಲಪ್ರಭಾ ನೆರೆ ಪ್ರವಾಹ ಸಂತ್ರಸ್ತರಿಗೆ ಆಹಾರದ ಕಿಟ್, ಕೊರೊನಾ ವಾರಿಯರ್ಸ್‌ಗೆ ಸಲಕರಣೆ ಮತ್ತು ಬಡವರಿಗೆ ನೇತ್ರ ಚಿಕಿತ್ಸೆ ಮೂಲಕ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.