ಬಾಗಲಕೋಟೆ: ಪ್ರಸಕ್ತ ವರ್ಷದಲ್ಲಿ ಜಿಲ್ಲೆಗೆ ಸಿಹಿ ಹಾಗೂ ಕಹಿ ಘಟನೆಗಳೆರಡೂ ನಡೆದಿವೆ. ಪ್ರಶಸ್ತಿ, ಸಾವು, ಹೋರಾಟ, ಸಂಭ್ರಮ, ಅಪಘಾತಗಳಿಗೆ ಜಿಲ್ಲೆಯ ಜನರು ಸಾಕ್ಷಿಯಾದರು.

ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ದೊರಕಿದ್ದು ಸಿಹಿಯಾದರೆ, ಶಾಸಕರಾಗಿದ್ದವರೊಬ್ಬರು ನಿಧನರಾಗಿದ್ದು ಕಹಿಯಾಗಿತ್ತು.

ಪದ್ಮಶ್ರೀ ಪ್ರಶಸ್ತಿ:

81 ವರ್ಷದ ಗೋಂದಳಿ ಹಾಡುಗಳ ಸರದಾರ ವೆಂಕಪ್ಪ ಸುಗತೇಕರ ಪದ್ಮಶ್ರೀ ದೊರಕಿತು. ವರ್ಷದ ಆರಂಭವು ಈ ಸಿಹಿ ವಿಷಯದೊಂದಿಗೆ ಆರಂಭವಾಯಿತು. ಒಂದು ಸಾವಿರಕ್ಕೂ ಹೆಚ್ಚು ಗೊಂಧಳಿ ಹಾಡುಗಳನ್ನು ಹಾಡಿರುವ ಅವರು, 150 ಗೊಂಧಳಿ ಕತೆಗಳನ್ನು ಮಕ್ಕಳಿಗೆ ಹೇಳುವ ಮೂಲಕ ಮಕ್ಕಳಲ್ಲಿ ಕತೆಗಳ ಬಗ್ಗೆ ಆಸಕ್ತಿ ಹುಟ್ಟು ಹಾಕಿದ್ದಾರೆ.

ಹುನಗುಂದ ತಾಲ್ಲೂಕಿನ ಅಮರಾವತಿಯ ಬಸಪ್ಪ ಭಜಂತ್ರಿ ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು. ಶಹನಾಯಿ, ಕೊಳಲು, ಕ್ಲಾರಿಯೋನೆಟ್, ಸ್ಯಾಕ್ಸೋಫೋನ್, ಹಾರ್ಮೋನಿಯಂ ನುಡಿಸುತ್ತಾರೆ. 65 ವರ್ಷಗಳಿಂದ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.

ಶಿಲ್ಪಕಾರ ನಾಗಲಿಂಗಪ್ಪ ಗಂಗೂರ, ನ್ಯಾಯಾಧೀಶ ಪವನಕುಮಾರ ಭಜಂತ್ರಿ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.

ಎಚ್.ವೈ. ಮೇಟಿ ನಿಧನ:

ಐದು ಬಾರಿ ಶಾಸಕ, ಎರಡು ಬಾರಿ ಸಚಿವ, ಸಂಸದರೂ ಆಗಿದ್ದ ಜಿಲ್ಲೆಯ ಹಿರಿಯ ನಾಯಕ ಎಚ್.ವೈ. ಮೇಟಿ ಸಾವು ಜಿಲ್ಲೆಗೆ ಅಘಾತಕಾರಿಯಾಗಿತ್ತು. ಗ್ರಾಮ ಪಂಚಾಯಿತಿ ಆರಂಭಿಸಿ, ಶೈಕ್ಷಣಿಕ ಹಿನ್ನಲೆಯಿಲ್ಲದಿದ್ದರೂ, ಸಂಘಟನೆಯನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಲೋಕಸಭೆಯವರೆಗೂ ಗೆಲುವು ಸಾಧಿಸಿದ್ದರು.

ರಾಜಕೀಯದಲ್ಲಿ ಅಜಾತಶತ್ರುವಾಗಿದ್ದ ಅವರು, ಸೌಮ್ಯ ಸ್ವಭಾವದಾಗಿದ್ದರು. ಸರ್ಕಾರಿ ಕಾಲೇಜು ಆರಂಭಿಸಬೇಕು ಎಂಬ ಅವರ ಯತ್ನಕ್ಕೆ ಕೊನೆಗೂ ಸಫಲತೆ ಸಿಕ್ಕಿತ್ತು.

ಬಂಡಿಗಣಿ ಗ್ರಾಮದಲ್ಲಿ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯರಾದರು. ದಾಸೋಹದಿಂದಾಗಿ ಅಪಾರ ಭಕ್ತಸಮೂಹವನ್ನು ಹೊಂದಿದ್ದರು. ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನಗಳ ಸಮಿತಿ ಅಧ್ಯಕ್ಷರಾಗಿದ್ದ ಸಾಗರ ತೆಕ್ಕೆನ್ನವರ ಅಪಘಾತದಲ್ಲಿ ಮೃತರಾದರು.

ಪಂಚಮಸಾಲಿ ಪೀಠ ವಿವಾದ:

ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠ ಈ ವರ್ಷ ವಿವಾದದ ಕೇಂದ್ರ ಬಿಂದುವಾಗಿತ್ತು. ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಕೊಡಿಸಲು ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜಕೀಯ ನಾಯಕರ ಸಖ್ಯದಿಂದಾಗಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾದ ಮೇಲೆ ವಿಜಯಾನಂದ ಕಾಶಪ್ಪನವರ, ಸ್ವಾಮೀಜಿ ಅವರನ್ನು ಪೀಠದಿಂದ ಕೆಳಗಿಳಿಸಿದ್ದಾರೆ. ಪೀಠದಿಂದ ದೂರ ಉಳಿದಿರುವ ಸ್ವಾಮೀಜಿ ಕೂಡಲಸಂಗಮದಲ್ಲಿಯೇ ಪ್ರತ್ಯೇಕ ವಾಸ ಆರಂಭಿಸಿದ್ದಾರೆ.

ಕೊನೆಗೂ ವೈದ್ಯಕೀಯ ಕಾಲೇಜು ಮಂಜೂರು:

ಹಲವು ವರ್ಷಗಳ ಹಿಂದೆ ನಡೆದಿದ್ದ ಹೋರಾಟದ ಫಲವಾಗಿ ಕೊನೆಗೂ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. 2014ರಲ್ಲಿಯೇ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿತ್ತಾದರೂ, ಆರಂಭವಾಗಿರಲಿಲ್ಲ. ತೀವ್ರವಾದ ಹೋರಾಟವನ್ನೇ ಜಿಲ್ಲೆಯ ಜನತೆ ಮಾಡಬೇಕಾಯಿತು. ಹೊಸ ಸರ್ಕಾರ ರಚನೆಯಾದ ಎರಡು ವರ್ಷಗಳ ನಂತರ ಕಾಲೇಜಿಗೆ ಮಂಜೂರಾತಿ ಸಿಕ್ಕಿದೆ. ಇದೇ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ.

ಯುಕೆಪಿ ದರ ನಿಗದಿ:

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕು ಎಂಬ ಹೋರಾಟ ಹಲವು ದಶಕಗಳಿಂದ ನಡೆದುಕೊಂಡೇ ಬಂದಿದೆ. ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂಬ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರವು ಪ್ರತಿ ಎಕರೆ ಒಣಭೂಮಿಗೆ ₹30 ಲಕ್ಷ, ನೀರಾವರಿ ಭೂಮಿಗೆ ₹40 ಲಕ್ಷ ನಿಗದಿ ಮಾಡಿರುವುದು ಬಹುತೇಕ ಸಂತ್ರಸ್ತರಿಗೆ ಸಮಾಧಾನ ತಂದಿದೆ. ಆದರೆ, ಅದಕ್ಕೆ ಅನುದಾನವಿಡದೇ ವರ್ಷಪೂರ್ತಿ ದರ ನಿಗದಿಗೇ ಸೀಮಿತವಾಗಿದ್ದು ಸಂತ್ರಸ್ತರಲ್ಲಿ ಬೇಸರ ಮೂಡಿಸಿದೆ.

ಅಪಘಾತಗಳು:

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸೊನ್ನ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ತೆಂಗಿನಮಠ ಓಣಿಯ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಮೃತರಾದರು. ನಿಂತಿದ್ದ ಲಾರಿಗೆ ಖಾಜಾ ಬಂದಾ ನವಾಜ್ ದರ್ಗಾಕ್ಕೆ ಹೊರಟಿದ್ದವರು ಇನ್ನಿಲ್ಲವಾಗಿದ್ದರು.

ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಹತ್ತಿರವಿರುವ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ಮಂಗಳವಾರ ಮಧ್ಯರಾತ್ರಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ರಭಸವಾಗಿ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ನಾಲ್ವರೂ ಯುವಕರು ಮೃತಪಟ್ಟರು. ಎಲ್ಲರೂ 17 ರಿಂದ 22 ವರ್ಷ ವಯಸ್ಸಿನವರಾಗಿದ್ದರು.

ಬಾಗಲಕೋಟೆ ತಾಲ್ಲೂಕಿನ ಈರಾಪುರ ಬಳಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು, ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟರು.

ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಬಳಿ ನಡೆದ ಅಪಘಾತದಲ್ಲಿ ಕುಳಗೇರಿ ಕ್ರಾಸ್ನಲ್ಲಿ ಹೋಟೆಲ್ ನಡೆಸುತ್ತಿದದ ವಿಠ್ಠಲ ಶೆಟ್ಟಿ ಸೇರಿದಂತೆ ಅವರ ಕುಟುಂಬದ ಐವರು ಮೃತರಾದರು. ನಿಶ್ಚಿತಾರ್ಥವಾಗಿದ್ದ ಶ್ವೇತಾ ಸಹ ಅವರಲ್ಲೊಬ್ಬರಾಗಿದ್ದರು.

ಕಬ್ಬು ಹೋರಾಟ–ಟ್ರ್ಯಾಕ್ಟರ್ಗಳಿಗೆ ಬೆಂಕಿ ಕಬ್ಬಿನ ಬೆಲೆ ನಿಗದಿಗೆ ಪ್ರತಿ ವರ್ಷ ರೈತರು ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಈ ವರ್ಷವೂ ಆರಂಭವಾದ ಹೋರಾಟ ಕಬ್ಬಿನ ಟ್ರ್ಯಾಕ್ಟರ್ಗಳಿಗೆ ಬೆಂಕಿ ಇಡುವ ಮಟ್ಟಕ್ಕೆ ಹೋಗಿದ್ದು ಕಪ್ಪು ಚುಕ್ಕೆಯಾಗಿ ಕಾಣಿಸಿದೆ. ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿದ್ದ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಯಿತು. ಎಎಸ್ಪಿ ಮಹಾಂತೇಶ್ವರ ಜಿದ್ದಿ ಗಲಾಟೆಯಲ್ಲಿ ಕಾಲು ಮುರಿದುಕೊಂಡರು. ಎಂಟ ದ್ವಿಚಕ್ರ ವಾಹನಗಳೂ ಬೆಂಕಿಗೆ ಆಹುತಿಯಾದವು. ಕೂಡಲಸಂಗಮದಲ್ಲಿ ಬಸವಾದಿ ಶರಣರ ವೈಭವವನ್ನು ಅದ್ದೂರಿಯಾಗಿ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನೂರಾರು ಸ್ವಾಮೀಜಿಗಳು ಭಾಗವಹಿಸಿದ್ದರು. ಬಾಗಲಕೋಟೆಯಲ್ಲಿ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸೇನೆಗೆ ಸೇರ್ಪಡೆಯಾಗಿರುವ ಮುಧೋಳ ಹೌಂಡ್ (ಶ್ವಾನಗಳು) ಓಡಿಶಾದ ಸಿಐಡಿ ತಂಡ ಸೇರಿಕೊಂಡವು. ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ನಲ್ಲಿ ಪ್ರಸ್ತಾಪ ಮಾಡಿದರು. ಬಹಳ ವರ್ಷಗಳ ನಂತರ ರನ್ನ ಬೆಳಗಲಿ ಹಾಗೂ ಮುಧೋಳದಲ್ಲಿ ರನ್ನ ವೈಭವ ಅದ್ದೂರಿಯಾಗಿ ನಡೆಯಿತು. ರನ್ನನ ಸಾಹಿತ್ಯ ಕುರಿತು ವಿಚಾರ ಸಂಕಿರಣ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಬಡ್ಡಿಮ ಗ್ರಾಮೀಣ ಸಾಹಸ ಕ್ರೀಡೆಗಳೂ ಗಮನ ಸೆಳೆದವು. ಬಾದಾಮಿಯಲ್ಲಿ ನಡೆಯಬೇಕಿದ್ದ ಚಾಲುಕ್ಯ ಉತ್ಸವ ಈ ವರ್ಷದಲ್ಲಿ ನಡೆಯಲಿಲ್ಲ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗಾಯಕ ಮ್ಯೂಸಿಕ್ ಮೈಲಾರಿ ಬಂಧಿಸಲಾಯಿತು. ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು ₹11 ಕೋಟಿಗೂ ಹೆಚ್ಚು ಮೊತ್ತ ವಂಚನೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.