ಹುನಗುಂದ: ದಿನದಿಂದ ದಿನಕ್ಕೆ ತಾಲ್ಲೂಕಿನಾದ್ಯಂತ ಮದ್ರಾಸ್ ಐ ಪ್ರಕರಣಗಳು ಹೆಚ್ಚಾಗುತ್ತಿದ್ದು, ವೈದ್ಯರನ್ನು ಸಂಪರ್ಕಿಸಿ ಎಚ್ಚರವಹಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳಲ್ಲಿ 75ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ ಬುಧವಾರ ಒಂದೇ ದಿನ 25 ಪ್ರಕರಣಗಳು ಕಂಡುಬಂದಿವೆ. ಮದ್ರಾಸ್ ಐ ಸೋಂಕೀತರು ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ಅತಿಯಾದ ತುರಿಕೆಯಿಂದ ಕಣ್ಣಿನ ಪದರು ಕಾರ್ನಿಯಾ ಅಲ್ಸರ್‌ಗೆ ತುತ್ತಾಗಬಹುದು. ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಸಾರ್ವಜನಿಕರು ಮುಂಜಾಗ್ರತೆ ಕೈಗೊಳ್ಳುವುದರ ಜೊತೆಗೆ ಎಚ್ಚರಿಕೆಯಿಂದ ಇರಬೇಕಾಗಿದೆ.

ಮದ್ರಾಸ್ ಐ ಸೋಂಕೀತರ ಲಕ್ಷಣಗಳು: ಕಣ್ಣುಗಳು ಕೆಂಪಾಗುವುದು, ಕಣ್ಣಿನ ಗುಡ್ಡೆ ದಪ್ಪಗಾಗುವುದು, ಕಣ್ಣಿನನಲ್ಲಿ ಹೆಚ್ಚಿನ ಪ್ರಮಾಣದ ನೀರು ಹೊರಸೂಸುವುದು, ಕಣ್ಣಿನಲ್ಲಿ ಅತಿಯಾದ ತುರಿಕೆ (ಕಣ್ಣನ್ನು ಪದೆ ಪದೆ ಉಜ್ಜುವುದು), ಕಣ್ಣಿನ ರೆಪ್ಪೆಗಳು ಪರಸ್ಪರ ಅಂಟಿಕೊಳ್ಳುವುದು ಈ ರೀತಿಯಾಗಿ ಲಕ್ಷಣಗಳು ಕಂಡುಬಂದವರು ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.