ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಜಿ.ಪಂ. ಗೆ ಮೂರು ಪ್ರಶಸ್ತಿ

Published 9 ಮಾರ್ಚ್ 2024, 16:09 IST
Last Updated 9 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ಬಾಗಲಕೋಟೆ: ಮಹಿಳೆಯರ ಜೀವನಮಟ್ಟ ಸುಧಾರಣೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಾಡಿರುವ ಉತ್ತಮ ಸಾಧನೆಗೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮೂರು ವಿಭಾಗಗಳಲ್ಲಿ ವಿವಿಧ ಪ್ರಶಸ್ತಿ ಪಡೆದುಕೊಂಡಿದೆ.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಬೆಂಗಳೂರಿನಲ್ಲಿ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು, ಫಲಾನುಭವಿಗಳು ಪ್ರಶಸ್ತಿ ಸ್ವೀಕರಿಸಿದರು.

ಅತಿ ಹೆಚ್ಚು ಎಸ್‌ಎಚ್‌ಜಿ ಕಾಮನ್‌ ವರ್ಕ್‌ಶೆಡ್‌ ನಿರ್ಮಾಣ ಮಾಡಿರುವುದು, ಲಿಂಗತ್ವ ಪೋರ್ಟಲ್‌ನಲ್ಲಿ ದಾಖಲೀಕರಣ, ಎಂಕೆಪಿಸಿ ನಲ್ಲಿ ಪ್ರಗತಿಗೆ ಪ್ರಶಸ್ತಿ ಲಭಿಸಿವೆ.

ಸ್ತ್ರೀ ಶಕ್ತಿ, ಸ್ವ ಸಹಾಯ ಗುಂಪಿನ ಒಕ್ಕೂಟದ ಸದಸ್ಯರಿಗೆ ಕೌಶಲ ಆಧರಿತ ನಾನಾ ಚಟುವಟಿಕೆಗಳಿಗಾಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಡಿ ಉದ್ಯೋಗ ಖಾತ್ರಿಯಲ್ಲಿ ವರ್ಕ್‌ಶೆಡ್‌ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಈಗಾಗಲೇ 16 ಶೆಡ್‌ಗಳ ನಿ್ಮಾಣ ಪೂರ್ಣವಾಗಿದ್ದು, 12 ಶೆಡ್‌ಗಳ ನಿರ್ಮಾಣ ಕಾರ್ಯ ನಡೆದಿದೆ.

ಲಿಂಗತ್ವ ಆಧಾರದ ಮೇಲೆ ಜೀವನದಲ್ಲಿ ಎದುರಾಗುವ ಅಡೆತಡೆ ಪರಿಹರಿಸಲು ಜಿಲ್ಲೆಯ ವಿವಿಧೆಡೆ ಮಹಿಳೆಯರಿಗೆ ಕಾನೂನು ಅರಿವು ಅಭಿಯಾನ ನಡೆಸಲಾಗಿದೆ. ಶೇ 100ರಷ್ಟು ಕೈಗೊಂಡಿರುವ ಕಾರ್ಯವನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ.

ಮಹಿಳಾ ರೈತ ಉತ್ಪಾದಕ ಕಂಪನಿ ಸ್ಥಾಪಿಸುವ ಮೂಲಕ ಜಿಲ್ಲೆಯ ಸಣ್ಣ, ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳ ಮಾರಾಟ ಮಾಡಿ ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ರಬಕವಿ–ಬನಹಟ್ಟಿಯಲ್ಲಿ ಕಂಪನಿ ಆರಂಭಿಸಿದ್ದು, 3 ಸಾವಿರ ಸದಸ್ಯರಿಂದ ₹27 ಲಕ್ಷ ಷೇರು ಸಂಗ್ರಹಿಸಲಾಗಿದೆ.

ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಇರುವ ಯೋಜನೆಗಳ ವ್ಯವಸ್ಥಿತವಾಗಿ ಅನುಷ್ಠಾಣಗೊಳಿಸಲಾಗಿದೆ. ಇದಕ್ಕೆ ಮಹಿಳೆಯರೂ ಕೈಜೋಡಿಸಿದ್ದಾರೆ
ಶಶಿಧರ ಕುರೇರ ಸಿಇಒ ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT