ಮಂಗಳವಾರ, ಜುಲೈ 14, 2020
28 °C
ಜೂನ್‌ 13ರಿಂದ ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶ

ಬಾಗಿಲು ತೆರೆದ ಮಂದಿರ, ಮಸೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಚರ್ಚ್‌ಗಳ ಹೊರತಾಗಿ ಜಿಲ್ಲೆಯಲ್ಲಿ ಜೂನ್ 8ರಂದು ಮಂದಿರ ಹಾಗೂ ಮಸೀದಿಗಳು ಬಾಗಿಲು ತೆರೆದವು. ಮಂದಿರದಲ್ಲಿ ದೇವರ ದರ್ಶನ ಹಾಗೂ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು.

ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ, ಬಾದಾಮಿಯ ಬನಶಂಕರಿ ಗುಡಿ, ಬೀಳಗಿ ತಾಲ್ಲೂಕು ಚಿಕ್ಕಸಂಗಮದ ಸಂಗಮೇಶ್ವರ ದೇವಸ್ಥಾನ
ಸೇರಿದಂತೆ ಜಿಲ್ಲೆಯ ಪ್ರಮುಖ ದೇಗುಲಗಳು ಬಾಗಿಲು ತೆರೆದವು. ಭಕ್ತರು ಸುರಕ್ಷಿತ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವರ ದರ್ಶನ ಮಾಡಿದರು. ಆದರೆ ಪೂಜೆ, ತೀರ್ಥ, ಪ್ರಸಾದಗಳ ವಿತರಣೆಗೆ ಅವಕಾಶವಿರಲಿಲ್ಲ.

ಮಸೀದಿಗಳಲ್ಲಿ ಪ್ರಾರ್ಥನೆ: ಬಾಗಲಕೋಟೆ ನಗರದ 40 ಸೇರಿದಂತೆ ಜಿಲ್ಲೆಯ 420 ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು. ’ಎಲ್ಲ ಕಡೆಯೂ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ
ಪ್ರವೇಶವಿರಲಿಲ್ಲ. ಅವರಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಹೇಳಲಾಗಿದೆ‘ ಎಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮೈನುದ್ದೀನ್ ನಬಿವಾಲೆ ’ಪ್ರಜಾವಾಣಿ‘ಗೆ ತಿಳಿಸಿದರು.

ಜೂನ್ 13ರಿಂದ ಚರ್ಚ್‌ ತೆರೆಯಲಿವೆ:

‘ನಮಗೆ ಧರ್ಮಪ್ರಾಂತ್ಯದಿಂದ ಯಾವುದೇ ಸೂಚನೆ ಬಂದಿರಲಿಲ್ಲ. ಹೀಗಾಗಿ ಬಾಗಿಲು ತೆರೆಯಲಿಲ್ಲ. ಜೂನ್ 13ರಿಂದ ಚರ್ಚ್‌ಗಳ ಬಾಗಿಲು ತೆಗೆದು ಸುರಕ್ಷಿತೆಯ ನಿಯಮಗಳೊಂದಿಗೆ ಪ್ರಾರ್ಥನೆ ಆರಂಭಿಸಲಾಗುವುದು. ಅದೇ ದಿನ ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು’ ಎಂದು ನವನಗರದ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಪ್ರಕಾಶ ಮೊರೆಸ್ ತಿಳಿಸಿದರು.

ಕೂಡಲಸಂಗಮ ವರದಿ: ಇಲ್ಲಿನ ಸಂಗಮೇಶ್ವರ ದೇವಾಲಯದಲ್ಲಿ ಮೊದಲ ದಿನ 800 ಭಕ್ತರು ಸಂಗಮನಾಥನ ದರ್ಶನ ಪಡೆದರು. ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ದೇವರ ದರ್ಶನ ದರ್ಶನ ಪಡೆದರು.

‘ನಾನು ಪ್ರತಿ ಅಮವಾಸೆಗೆ ದರ್ಶನಕ್ಕೆ ಬರುತ್ತಿದ್ದೆ, ಇಂದು ದರ್ಶನ ಭಾಗ್ಯ ಸಿಕ್ಕೂ ಸಂತೋಷವಾಗಿದೆ’ ಎಂದು ಕುಷ್ಟಗಿಯ ಸಂಗಮೇಶ ಪಾಟೀಲ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು