ರಬಕವಿ ಬನಹಟ್ಟಿ: ಆಗಸ್ಟ್ ನಂತರ ಬಾಳೆ ಹಣ್ಣಿನ ದರದಲ್ಲಿ ಸಾಕಷ್ಟು ಇಳಿಕೆಯಾ ಗಿದ್ದು, ಬಾಳೆಕಾಯಿಗಳನ್ನು ಬೆಳೆದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಳೆಕಾಯಿಗಳನ್ನು ಖರೀದಿ ಮಾಡುತ್ತಿರುವವರು ಒಂದು ಕೆ.ಜಿಗೆ ₹4, ₹5 ಕ್ಕೆ ಕೇಳುತ್ತಿರುವುದು ರೈತರಲ್ಲಿ ಆಘಾತವನ್ನುಂಟು ಮಾಡಿದೆ. ಇನ್ನೂ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬಾಳೆ ಗಿಡಗಳಿಗೆ ಕೊಳೆ ರೋಗ ಬಂದಿದ್ದು, ಗಿಡಗಳು ಒಣಗುತ್ತಿವೆ.

ಬಾಳೆ ಕಾಯಿಗಳನ್ನು ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ಸಾಕಷ್ಟು ಬಾಳೆಕಾಯಿಗಳು ಗಿಡದಲ್ಲಿಯೇ ಒಣಗುತ್ತಿವೆ.

ಈ ಭಾಗದಲ್ಲಿ ಬೆಳೆದ ಬಾಳೆ ಕಾಯಿಗಳನ್ನು ಬೇರೆ ದೇಶಗಳಿಗೆ ಮತ್ತು ಉತ್ತರ ಭಾರತಕ್ಕೆ ಕಳಿಸಲಾಗುತ್ತಿತ್ತು. ಇದು ಈಗ ಸಂಪೂರ್ಣವಾಗಿ ನಿಂತಿದೆ. ಆದ್ದರಿಂದ ಬೇಡಿಕೆ ಕಡಿಮೆಯಾಗಿದೆ. ಇನ್ನೂ ಚಳಿಗಾಲದಲ್ಲಿ ಬಾಳೆ ಹಣ್ಣುಗಳನ್ನು ಬಳಸುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದ್ದು, ಇದರಿಂದಲೂ ಬೆಲೆ ಕುಸಿತಗೊಳ್ಳಲಿದೆ.

‘ಒಂದು ಕೆ.ಜಿ ಬಾಳೆಕಾಯಿಗೆ ₹4 ರಿಂದ ₹5ರಂತೆ ಕೇಳುತ್ತಿದ್ದಾರೆ. ಹಾಕಿದ ಖರ್ಚು ಕೂಡಾ ನಮಗೆ ಬರುತ್ತಿಲ್ಲ. ಸಾಲ ಮಾಡಿ ಬಾಳೆ ಬೆಳೆ ಬೆಳೆದಿದ್ದೇವೆ. ಸರ್ಕಾರ ಕೂಡಲೇ ರೈತರ ಸಹಾಯಕ್ಕೆ ಬರಬೇಕು’ ಎಂದು ಯಲ್ಲಟ್ಟಿ ಗ್ರಾಮದ ರೈತರಾದ ಸುರೇಶ ಮೋಪಗಾರ ತಿಳಿಸಿದರು.

‘ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆ ಕಾಯಿಗಳನ್ನು ಬೆಳೆದಿದ್ದೇವೆ. ಒಂದು ಸಸಿಗೆ ₹25ರಂತೆ ಪ್ರತಿ ಎಕರೆಗೆ ಅಂದಾಜು ₹1.50 ಲಕ್ಷದಷ್ಟು ಖರ್ಚು ಮಾಡಿದ್ದೇವೆ. ಈಗ ನಾಲ್ಕೈದು ರೂಪಾಯಿಗಳಿಗೆ ಕೆ.ಜಿ ಕಾಯಿಗಳನ್ನು ಕೇಳುತ್ತಿದ್ದಾರೆ. ಇದರಿಂದ ಬಾಳೆಹಣ್ಣುಗಳನ್ನು ಬೆಳೆದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಮಣ್ಣು ಪರೀಕ್ಷೆ, ನಿರ್ವಹಣೆ ಅಗತ್ಯ’

‘ಎರಡನೇ ವರ್ಷ ಮಾತ್ರ ಕೊಳೆ ರೋಗ ಬಂದಿದೆ. ರೈತರು ಸರಿಯಾಗಿ ನೀರು ಮತ್ತು ಗೊಬ್ಬರ ನೀಡದೇ ಇದ್ದರೆ ಮತ್ತು ಸಸಿಗಳನ್ನು ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ ಸಸಿಗಳಿಗೆ ರೋಗಗಳಿದ್ದಾಗ ಅವುಗಳ ಪರಿಣಾಮ ಈಗ ಗೊತ್ತಾಗುತ್ತವೆ. ಸರಿಯಾದ ರೀತಿಯಲ್ಲಿ ಮಣ್ಣು ಪರೀಕ್ಷೆ ಮತ್ತು ನಿರ್ವಹಣೆ ಯಾದರೆ ಯಾವುದೇ ರೋಗ ಬರುವುದಿಲ್ಲ. ಈ ನಿಟ್ಟಿನಲ್ಲಿ ಗಮನ ನೀಡಲಾಗುವುದು’ ಎನ್ನುತ್ತಾರೆ ಜಮಖಂಡಿ ಕೃಷಿ ಅಧಿಕಾರಿ ಈರಣ್ಣ ಹೊಸಮನಿ.

ಬಾಳೆ ಗಿಡಗಳಿಗೆ ಕೊಳೆ ರೋಗ ಬಂದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಉಚಿತವಾಗಿ ಔಷಧ ನೀಡುವುದರ ಜೊತೆಗೆ ಮಾರ್ಗದರ್ಶನ ಮಾಡಬೇಕು
ಸದಾಶಿವ ಬಂಗಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.