ಗುರುವಾರ , ಸೆಪ್ಟೆಂಬರ್ 23, 2021
28 °C

ಭ್ರಷ್ಟಾಚಾರ, ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ತೆಗೆದಿದ್ದಾರೆ: ಸಿದ್ದರಾಮಯ್ಯ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಯಾರು ಮುಂದಿನ ಮುಖ್ಯಮಂತ್ರಿ ಅಂತ ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಬಾದಾಮಿ ತಾಲ್ಲೂಕಿನ ಚೊಳಚಗುಡ್ಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪನವ್ರದ್ದು ಭ್ರಷ್ಟ ಸರ್ಕಾರ ಅಂತಾ ಕೇಂದ್ರಕ್ಕೂ ಗೊತ್ತಿತ್ತು, ಇಡೀ ದೇಶದ ಜನತೆಗೂ ಗೊತ್ತಿತ್ತು. ನಾವು 30%  ಸರ್ಕಾರ ಅಂತ‌ ಕರೆತಿದ್ವಿ ಎಂದರು.

ಎಲ್ಲ ಪ್ರಾಜೆಕ್ಟ್ ಗಳಲ್ಲೂ ಶೇ 30 ರಷ್ಟು ವಸೂಲು ಮಾಡ್ತಿದ್ರು. ಬಹುಶಃ ಅದೊಂದು ಕಾರಣ (ಭ್ರಷ್ಟಚಾರ) ಹಾಗೂ ವಯಸ್ಸಿನ ಕಾರಣದಿಂದ ಅವ್ರನ್ನ ತೆಗೆದಿದ್ದಾರೆ ಎಂದರು.

ಮಧ್ಯಂತರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಐ ಡೋಂಟ್ ಥಿಂಕ್, ಮಿಡ್ ಟರ್ಮ್ ಎಲೆಕ್ಷನ್. ಮಧ್ಯಂತರ ಚುನಾವಣೆ ಬರುತ್ತೆ ಅಂತಾ ನನಗನಿಸಲ್ಲ ಎಂದರು.

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು