ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಮತ್ತೊಬ್ಬರಿಗೆ ಕೋವಿಡ್ 19 ಸೊಂಕು ದೃಢ

Last Updated 22 ಮೇ 2020, 15:40 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಬ್ಬ ವ್ಯಕ್ತಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

ಬಾದಾಮಿ ಪಟ್ಟಣದಲ್ಲಿ ಈ ಹಿಂದೆ ಕೋವಿಡ್–19 ಸೋಂಕು ದೃಢಪಟ್ಟಿರುವ 18 ವರ್ಷದ ಯುವತಿಯ (ರೋಗಿ ಸಂಖ್ಯೆ–680) 50 ವರ್ಷದ ಚಿಕ್ಕಪ್ಪನಿಗೆ ಸೋಂಕು ತಗುಲಿದೆ. ಯುವತಿಗೆ ಸೋಂಕು ದೃಢಪಟ್ಟ ಕಾರಣ ಆಕೆಯ ಕುಟುಂಬದವರನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಕುಟುಂಬದ ಸದಸ್ಯರ ಮೊದಲ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. 14 ದಿನಗಳ ಬಳಿಕ ಚಿಕ್ಕಪ್ಪನಿಗೆ ದೃಢಪಟ್ಟಿದೆ.

ಎಸ್ಪಿ ಕಚೇರಿ: ದೂರು ಪ್ರಾಧಿಕಾರ ರಚನೆ
ಬಾಗಲಕೋಟೆ:
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ ಮಾಡಲಾಗಿದೆ.

ಡಿವೈಎಸ್ಪಿ, ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಸ್ಟಡಿಯಲ್ಲಿ ಇದ್ದಾಗ ನಡೆದ ಸಾವು, ತೀವ್ರ ಸ್ವರೂಪದ ಗಾಯ, ಅತ್ಯಾಚಾರದ ದೂರು, ಅಧಿಕಾರಿಯ ದುರ್ನಡತೆ, ಅಧಿಕಾರ ದುರುಪಯೋಗದ ಬಗ್ಗೆ ದೂರುಗಳಿದ್ದಲ್ಲಿ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪೊಲೀಸ್ ಕಚೇರಿ, ಬಾಗಲಕೋಟೆ (08354-235024, 235076) ಇವರಿಗೆ ಸಲ್ಲಿಸಬಹುದಾಗಿದೆ.

ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿ ದೂರುಗಳ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಎಸ್ಪಿ ಸದಸ್ಯ ಕಾರ್ಯದರ್ಶಿ ಹಾಗೂ ಬಾಗಲಕೋಟೆಯ ಸುಭಾಷ ಪಾಟೀಲ ಸದಸ್ಯರಾಗಿರುತ್ತಾರೆ. ಅದೇ ರೀತಿ ಅಡಿಷನಲ್ ಎಸ್ಪಿ ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ದೂರುಗಳಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ, ಕೊಠಡಿ ನಂ.36, ನೆಲಮಹಡಿ, ವಿಕಾಸಸೌಧ, ಬೆಂಗಳೂರು-1 (ದೂಸಂ.080-22386063) ಇವರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT