ಬುಧವಾರ, ಜೂನ್ 16, 2021
28 °C

ಕರ್ಫ್ಯೂಗೆ ಸೊಪ್ಪು ಹಾಕದ ಜನ: ಮಾಸ್ಕ್, ಸಾಮಾಜಿಕ ಅಂತರ ಮಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣ ದೃಢಪಟ್ಟಿವೆ. ಬುಧವಾರ ಒಂದೇ ದಿನ 333 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಆದರೆ ಸಾರ್ವಜನಿಕರು ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ.

ಬಾಗಲಕೋಟೆ ನಗರದ ಹಳೆ ಮಾರ್ಕೆಟ್ ಏರಿಯಾದಲ್ಲಿ ಗುರುವಾರ ಮುಂಜಾನೆ ಜನದಟ್ಟಣೆ ಕಂಡುಬಂದಿತು. ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು. ಆಗ ಮಾಸ್ಕ್ ಧರಿಸುವುದು, ಸಾಮಾಜಿಕ‌ ಅಂತರ ಕಾಯ್ದುಕೊಳ್ಳುವುದು ಕಂಡು ಬರಲಿಲ್ಲ.

ಪೊಲೀಸರು ದಂಡ ವಿಧಿಸಿದರೂ, ಲಾಠಿ ಏಟು ಕೊಟ್ಟರೂ ಅದಕ್ಕೆ ಸೊಪ್ಪು ಹಾಕದೇ ಬುಧವಾರ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕರ ಓಡಾಟ ನಡೆದೇ ಇತ್ತು. ದ್ವಿಚಕ್ರ ವಾಹನಗಳಲ್ಲಿ ಸವಾರರ ಓಡಾಟ ಸಾಮಾನ್ಯ ದಿನಗಳಂತೆಯೇ ಇತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು