ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಸ್ಫೋಟ: 7 ಜನರಿಗೆ ಗಾಯ

Published 3 ಮಾರ್ಚ್ 2024, 15:41 IST
Last Updated 3 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ಬೀಳಗಿ: ಪಟ್ಟಣದ ಕಾಟಕರ ಓಣಿಯ ಹುಚ್ಚಪ್ಪಯ್ಯನ ಕಟ್ಟಿ ಹತ್ತಿರ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ  ಅಡುಗೆ ಅನಿಲ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡು ಮನೆಯಲ್ಲಿದ್ದ ಗರ್ಭಿಣಿ ಹಾಗೂ 2 ವರ್ಷದ ಮಗು ಸೇರಿ 7 ಜನರಿಗೆ ಗಾಯವಾಗಿದೆ.

ಲಕ್ಷ್ಮಿ ನರಸಿಂಹಪ್ಪ ಹೆಳವರ ಅವರು ಕುಂದರಗಿಯ ಸುರಗಿರಿ ಬೆಟ್ಟದ ಭುವನೇಶ್ವರಿ ದೇವಸ್ಥಾನದಿಂದ ಮನೆಗೆ ಬಂದು ಅವರ ಸೊಸೆ ಸವಿತಾ ಪ್ರವೀಣ ಹೆಳವರ ಮನೆಯೊಳಗೆ ಹೋಗಿ ವಿದ್ಯುತ್ ಬಟನ್ ಹಾಕಿದ ತಕ್ಷಣ ಗ್ಯಾಸ್ ಸಿಲಿಂಡರ್  ಸ್ಪೋಟಗೊಂಡಿದೆ.

ಸಿಲಿಂಡರ್‌ ಸ್ಫೋಟದಿಂದ ಸವಿತಾಗೆ ಗಾಯವಾಗಿದ್ದಲ್ಲದೇ, ಪಕ್ಕದ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ 6 ಜನರಿಗೆ ಏಕಾಏಕಿ ಬೆಂಕಿ ತಗುಲಿ ಗಾಯವಾಗಿದೆ. ಮಹಿಳೆಯೊಬ್ಬರಿಗೆ ಹಾಗೂ 2 ವರ್ಷದ ಮಗುವಿಗೆ  ಹೆಚ್ಚಿನ ಪ್ರಮಾಣದಲ್ಲಿ ದೇಹ ಸುಟ್ಟಿದೆ. ಬೀಳಗಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT