ರಬಕವಿ ಬನಹಟ್ಟಿ: ದಾನಪ್ಪ ಹುಲಜತ್ತಿ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಿಷ್ಠೆಯಿಂದಾಗಿ ಅವರಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದೊರೆತಿದೆ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಜೇಂದ್ರ ಭದ್ರನವರ ತಿಳಿಸಿದರು.

ಸ್ಥಳೀಯ ಹಟಗಾರ ಮಂಗಳವಾರ ಪೇಟೆ ದೈವ ಮಂಡಳಿಯ ಕಾರ್ಯಾಲಯದಲ್ಲಿ ಶನಿವಾರ ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಾನಪ್ಪ ಹುಲಜತ್ತಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಭೀಮಶಿ ಮಗದುಮ ಮಾತನಾಡಿ, ತೇರದಾಳ ಮತಕ್ಷೇತ್ರವನ್ನು ಇಲ್ಲಿವರೆಗೆ ಹೊರಗಿನವರೇ ಆಯ್ಕೆಯಾಗುತ್ತ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಎರಡು ಸಮುದಾಯದ ಸೂಕ್ತ ಅಭ್ಯರ್ಥಿಯನ್ನು ವಿಧಾನ ಸಭೆಯ ಚುನಾವಣೆಗೆ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಮತಕ್ಷೇತ್ರದ ಪಕ್ಷದ ಮುಖಂಡರು ಮತ್ತು ಸಮುದಾಯದ ಹಿರಿಯರು ಗಮನ ನೀಡಬೇಕು. ಕ್ಷೇತ್ರದ ಅಭಿವೃದ್ಧಿಗೆ ರಾಜಕೀಯ ಆಶ್ರಯ ಕೂಡಾ ಮುಖ್ಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ನೇಕಾರಿಯ ಮತಕ್ಷೇತ್ರವಾಗಿರುವ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣದತ್ತ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ. ಇದರಿಂದ ಇಲ್ಲಿಯ ನೇಕಾರರಿಗೆ ಮತ್ತು ಜವಳಿ ಉದ್ಯೋಗಕ್ಕೆ ಮರು ಜೀವ ಸೃಷ್ಠಿಸಲು ಸಾಧ್ಯವಾಗುತ್ತದೆ ಎಂದು ಭೀಮಶಿ ಮಗದುಮ್ ತಿಳಿಸಿದರು.

ಶಂಕರ ಜುಂಜಪ್ಪನವರ, ರಾಜು ಅಂಬಲಿ ಮಾತನಾಡಿದರು. ವಿವಿಧ ಸಂಘಟನೆಯ ಸದಸ್ಯರು ದಾನಪ್ಪ ಹುಲಜತ್ತಿಯವರನ್ನು ಸನ್ಮಾನಿಸಿದರು. ರಾಜಶೇಖರ ಮಾಲಾಪುರ, ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ಪಂಡಿತ ಪಟ್ಟಣ, ಸುರೇಶ ಕೋಲಾರ, ಮಲ್ಲಿನಾಥ ಕಕಮರಿ, ಮಹಾದೇವ ಚರ್ಕಿ, ಸೋಮನಾಥ ಗೊಂಬಿ, ರಾಜು ಬೀಳಗಿ, ಶಶಿಕಾಂತ ಹುನ್ನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.