ತೇರದಾಳ: ‘ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಪ್ರಧಾನಿ ಮೋದಿ ಅವರ ಶ್ರಮ ಅವಿರತವಾದ್ದದ್ದು’ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 9 ವರ್ಷ ಮಾಡಿದ ಸಾಧನೆಗಳ ಕೈಪಿಡಿ ಬಿಡುಗಡೆ ಹಾಗೂ ಕರಪತ್ರ ವಿತರಿಸಿ ಅವರು ಮಾತನಾಡಿದರು.
‘ದೇಶದಲ್ಲಿ 70 ವರ್ಷಗಳಲ್ಲಿ ಆಗದ ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬುದು ದೇಶವಾಸಿಗಳ ಆಶಯವಾಗಿದೆ’ ಎಂದರು.
ಪಟ್ಟಣದ ಹಲವು ಮನೆಗಳಿಗೆ ತೆರಳಿ ಕರಪತ್ರ ವಿತರಿಸಲಾಯಿತು. ಪಕ್ಷದ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ ಅಕಿವಾಟ, ನಗರ ಘಟಕದ ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್, ಪಕ್ಷದ ಪ್ರಮುಖರಾದ ಪ್ರಭಾಕರ ಬಾಗಿ, ಸಿದ್ದು ಅಮ್ಮಣಗಿ, ನಿಂಗಪ್ಪ ಮಾಲಗಾಂವಿ, ಕಾಶೀನಾಥ ರಾಠೋಡ, ಸಂತೋಷ ಜಮಖಂಡಿ ಸೇರಿದಂತೆ ಅನೇಕರು ಇದ್ದರು.