ಮಂಗಳವಾರ, ಏಪ್ರಿಲ್ 20, 2021
ಸಮ್ಮೇಳನ ಅಧ್ಯಕ್ಷೆ ಡಾ.ಮಲ್ಲಿಕಾ ಘಂಟಿ ಬದುಕು ಬರಹ ಗೋಷ್ಠಿ

‘ಸ್ತ್ರೀಪರ ಕಾಳಜಿಯ ಹೋರಾಟದ ಬದುಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರೂರ (ಟಿ.ಎಂ.ಭಗವತಿ ವೇದಿಕೆ): ಡಾ.ಮಲ್ಲಿಕಾ ಘಂಟಿ ಅವರದು ನಿರಂತರ ಹೋರಾಟದ ಬದುಕು ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಹೇಳಿದರು.

ಅವರು ಇಲ್ಲಿ ನಡೆದಿರುವ ಬಾಗಲಕೋಟೆ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ 'ಸರ್ವಾಧ್ಯಕ್ಷರ ಬದುಕು-ಬರಹ' ಕುರಿತ ಗೋಷ್ಠಿಯಲ್ಲಿ ಡಾ.ಮಲ್ಲಿಕಾ ಘಂಟಿ ಅವರ ಬದುಕು-ಬರಹ ಕುರಿತು ಮಾತನಾಡಿ, ಡಾ.ಘಂಟಿ ಅವರು ತುಳಿತಕ್ಕೆ ಒಳಗಾದವರು, ಅಸಹಾಯಕರು, ಶೋಷಿತರು ಹಾಗೂ ಸ್ತ್ರೀಪರವಾಗಿ ನಿಂತು ಹೋರಾಟ ಮಾಡುವ ಕಾಳಜಿಯುಳ್ಳವರು ಎಂದರು.

ಡಾ.ಘಂಟಿ ಅವರ ಸಾಹಿತ್ಯದಲ್ಲಿ ಬದ್ಧತೆ, ವೈಚಾರಿಕತೆ, ಪ್ರಾಮಾಣಿಕತೆ ಇರುವುದನ್ನು ಕಾಣಬಹುದಾಗಿದೆ ಎಂದ ಡಾ.ದಳವಾಯಿ, ಮಲ್ಲಿಕಾ ಘಂಟಿ ಅವರು ಬಹಳಷ್ಟು ಜನ ತಿಳಿದುಕೊಂಡಂತೆ ಪುರುಷ ದ್ವೇಷಿಯೂ ಅಲ್ಲ ಜಾತಿವಾದಿಯೂ ಅಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಎಸ್.ಜಿ.ಕೋಟಿ, ಡಾ.ವಿಶ್ವನಾಥ ವಂಶಾಕೃತಮಠ, ಸಾಹಿತಿ ಜಿ.ಎಂ.ಸಿಂಧೂರ ಮಾತನಾಡಿ, ಡಾ.ಮಲ್ಲಿಕಾ ಘಂಟಿ ಅವರ ಚಿಂತನೆಗಳು, ಆಲೋಚನೆಗಳು ಶ್ರೇಷ್ಠಮಟ್ಟದವುಗಳಾಗಿದ್ದು, ಅವರೊಬ್ಬ ಸಾಧಕರಾಗಿ ಬೆಳೆದಿದ್ದಾರೆ ಎಂದರು.

ನಾರಾಯಣ ಯಳ್ಳಿಗುತ್ತಿ, ಡಾ.ಬಸವರಾಜ ಕುಂಬಾರ, ಶಂಕರ ಹೂಲಿ, ಗೀತಾ ದಾನಶೆಟ್ಟಿ, ಶ್ರೀಹರಿ ಧೂಪದ, ನಾಗರತ್ನ ಭಾವಿಕಟ್ಟಿ, ಎಸ್.ಎಸ್.ಮುಳ್ಳೂರ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಮ್ಮೇಳನದ ಅಧ್ಯಕ್ಷೆ ಡಾ.ಮಲ್ಲಿಕಾ ಘಂಟಿ, ತಮ್ಮ ಬದುಕು, ಬರಹ, ಇದಕ್ಕೆ ಪ್ರೇರಣೆ ಕುರಿತು ಸವಿವರವಾಗಿ ಮಾತನಾಡಿ, ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೀಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಸಾಹುಕಾರ ಸ್ವಾಗತಿಸಿದರು. ನಾಗರಾಜ ಬಾರಕೇರ, ಮಹಾಂತೇಶ ಹುಲ್ಯಾಳ ನಿರೂಪಿಸಿದರು. ಎಂ.ಬಿ.ಉಗರಗೋಳ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.