ಬುಧವಾರ, ಜುಲೈ 28, 2021
21 °C

ಬಾಗಲಕೋಟೆ: ವಿದ್ಯುತ್ ಶಾಕ್‌ನಿಂದ ವೃದ್ಧ ದಂಪತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಾಗಲಕೋಟೆ: ಬಚ್ಚಲು ಮನೆಯಲ್ಲಿ ಪಾತ್ರೆ ತೊಳೆಯುವ ವೇಳೆ ವಿದ್ಯುತ್ ಪ್ರವಹಿಸಿ ಬುಧವಾರ ಮುಂಜಾನೆ ವೃದ್ಧ ದಂಪತಿ ಸಾವಿಗೀಡಾಗಿದ್ದಾರೆ.

ನವನಗರದ ಸೆಕ್ಟರ್ ನಂ 2ರ ನಿವಾಸಿಗಳಾದ ಶ್ಯಾಮರಾವ್ ಕುಲಕರ್ಣಿ (75) ಹಾಗೂ ಅವರ ಪತ್ನಿ ಸರೋಜಾ ಕುಲಕರ್ಣಿ (62) ಸಾವಿಗೀಡಾದವರು.

ಸರೋಜಾ ಕುಲಕರ್ಣಿ ಮುಂಜಾನೆ ಬಚ್ಚಲು ಮನೆಯಲ್ಲಿ ಪಾತ್ರೆ ತೊಳೆಯುವಾಗ ವಿದ್ಯುತ್ ತಂತಿ ಹಾದು ಹೋಗಿದ್ದ ಪೈಪ್‌ನಲ್ಲಿ ನೀರು ಹರಿದು ವಿದ್ಯುತ್ ಪ್ರವಹಿಸಿದೆ. ಈ ವೇಳೆ ಕೂಗಿಕೊಂಡ ಅವರನ್ನು ರಕ್ಷಿಸಲು ಪತಿ ಶಾಮರಾವ್ ಮುಂದಾಗಿದ್ದಾರೆ. ಇಬ್ಬರಿಗೂ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು