ರಾಂಪುರ: ಬಾಗಲಕೋಟೆ- ಆಲಮಟ್ಟಿ ಮುಖ್ಯ ರಸ್ತೆಯ ಮೇಲೆ ರಾಂಪುರದಲ್ಲಿ ರಸ್ತೆ ಅತಿಕ್ರಮಿತ ಅಂಗಡಿ, ಮುಂಗ್ಗಟ್ಟುಗಳ ತೆರವು ಕಾರ್ಯಾಚರಣೆ ಮಂಗಳವಾರ ನಡೆಯಿತು.
ಹೈಕೋರ್ಟ್ ಆದೇಶದನ್ವಯ ಸೋಮವಾರವಷ್ಟೇ ಎಲ್ಲ ಅಂಗಡಿಗಳಿಗೆ ಸೂಚನೆ ನೀಡಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ತೆರವು ಕಾರ್ಯಚರಣೆ ಆರಂಭಿಸಿ ಸಾಯಂಕಾಲದ ಹೊತ್ತಿಗೆ ಪೂರ್ಣಗೊಳಿಸಲಾಯಿತು.
ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್‌ಐ ರಾಮನಗೌಡ ಸಂಕನಾಳ ಹಾಗೂ ಸಿಬ್ಬಂದಿ ಸುಪರ್ದಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಸಹಕಾರದೊಂದಿಗೆ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಹಳೇ ರಾಂಪುರದಿಂದ ಹಿಡಿದು ಹೊಸ ರಾಂಪುರದವರೆಗಿನ ಫುಟ್‌ಪಾತ್ ಮೇಲಿದ್ದ ಹಾಗೂ ರಸ್ತೆ ಪಕ್ಕದ ಚರಂಡಿಯ ಮುಂದೆ ನಿರ್ಮಿಸಿದ್ದ ಎಲ್ಲ ಅಂಗಡಿ ಹಾಗೂ ತಳ್ಳು ಗಾಡಿಗಳ ಸ್ಥಳಗಳನ್ನು ತೆರವು ಮಾಡಲಾಯಿತು.
ಯಾವ ವಿರೋಧ ಇಲ್ಲ: ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ವ್ಯಾಪಾರಸ್ಥರು, ಅಂಗಡಿಗಳ ಮಾಲೀಕರು ವಿರೋಧ ಮಾಡಲಿಲ್ಲ. ಕಾರ್ಯಾಚರಣೆಗೆ ಎಲ್ಲರೂ ಸಹಕರಿಸಿದರು ಎಂದು ಪಿಎಸ್ ಐ ಸಂಕನಾಳ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.