ತೇರದಾಳ: ಪಿಯುಸಿ-2 ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ, 3ನೇ ಪರೀಕ್ಷೆಗೆ ಅರ್ಜಿ ಭರ್ತಿ ಮಾಡಲು ಹೋದರೆ ಉತ್ತೀರ್ಣ ಎಂದು ತೋರಿಸುತ್ತಿರುವುದರಿಂದ ವಿದ್ಯಾರ್ಥಿ ಗೊಂದಲಕ್ಕೆ ಒಳಗಾಗಿದ್ದಾನೆ.

ಪ್ರಭುಲಿಂಗ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಆಕಾಶ ಬಾಳಿಕಾಯಿ ಪಿಯುಸಿ ಪರೀಕ್ಷೆ-1, 2ರಲ್ಲಿ ಕನ್ನಡ ವಿಷಯದಲ್ಲಿ ಅನುತ್ತೀರ್ಣನಾಗಿದ್ದಾನೆ. ಪರೀಕ್ಷೆ-3ಕ್ಕೆ ಅರ್ಜಿ ಭರ್ತಿ ಮಾಡಲು ಹೋದರೆ ಉತ್ತೀರ್ಣ ಎಂದು ತೋರಿಸುತ್ತಿದೆ. ಮರಳಿ ಪರೀಕ್ಷೆ ನಮೂದು ಜಾಗದಲ್ಲಿ ಪಾಸಾಗಿದ್ದಾನೆ. ಹೆಚ್ಚಿನ ಅಂಕ ಗಳಿಕೆಗೆ ₹175 ಭರಿಸಿದರೆ ಒಂದು ವಿಷಯಕ್ಕೆ ಪರೀಕ್ಷೆ ಬರೆಯಬಹುದೆಂಬ ಸೂಚನೆ ಲಭ್ಯವಾಗುತ್ತಿರುವುದರಿಂದ ಕಾಲೇಜು ಸಿಬ್ಬಂದಿ ಜೊತೆಗೆ ವಿದ್ಯಾರ್ಥಿ ಕೂಡ ಗೊಂದಲಕ್ಕೀಡಾಗಿದ್ದಾನೆ.

ತಂತ್ರಾಂಶದಲ್ಲಿ ಉತ್ತೀರ್ಣ ತೋರಿಸುತ್ತಿದೆ ಎಂದು ಪರೀಕ್ಷೆ-3 ಬರೆಯದಿದ್ದರೆ, ಮುಂದೆ ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂದು ನಮೂದಾದರೆ ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿಯನ್ನು ಕಾಡುತ್ತಿದೆ.

ಕಾಲೇಜು ಪ್ರಾಚಾರ್ಯ ವಿ.ಎಲ್.ನಾರಾಯಣಕರ `ಇದು ಪಿಯು ಬೋರ್ಡ್ನಿಂದ ಆಗಿರುವ ತೊಂದರೆಯಾಗಿದೆ. ನಮ್ಮ ಕಾಲೇಜಿನಲ್ಲಿ ಮಾತ್ರವಲ್ಲದೇ ಬೇರೆ, ಬೇರೆ ಕಾಲೇಜುಗಳಲ್ಲಿ ಕೂಡ ಇಂತಹದೇ ಪ್ರಮಾದಗಳಾಗಿವೆ. ಡಿಡಿಪಿಯು ಅವರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.