ಸೋಮವಾರ, ಜುಲೈ 4, 2022
22 °C
ಹೃದಯಾಘಾತಕ್ಕೆ ಬಲಿಯಾದ ಟಗರು

ಸೋಲಿಲ್ಲದ ಸರದಾರ, ಚಿನ್ನ, ಬೆಳ್ಳಿ ಗೆದ್ದ 'ಲವ್ಲಿ ಬಾಯ್' ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಟಗರಿನ ಕಾಳಗಕ್ಕೆ ಹೆಸರು ಮಾಡಿದ್ದ, ₹8 ಲಕ್ಷ ಬೆಲೆಬಾಳುತ್ತಿದ್ದ 'ಲವ್ಲಿ ಬಾಯ್' ಟಗರು ಮಂಗಳವಾರ ಸೀಗಿಕೇರಿ ಗ್ರಾಮದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದೆ.

ನಾಟಕಕಾರ, ಕಲಾವಿದ ಎಚ್.ಎನ್.ಶೇಬನ್ನವರ ಟಗರು ಈ ಭಾಗದಲ್ಲಿಯೇ ಹೆಸರುವಾಗಿತ್ತು. ಎಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಮಾತ್ರ ಕಟ್ಟಿಟ್ಟ ಬುತ್ತಿ. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಕೊಟ್ಟಿದ್ದ 'ಲವ್ಲಿ ಬಾಯ್' ಎಂಬ ಹೆಸರಿನಿಂದಲೇ ಈ ಟಗರನ್ನು ಕರೆಯಲಾಗುತ್ತಿತ್ತು.

ಚಿನ್ನ, ಬೆಳ್ಳಿ ಅಷ್ಟೇ ಅಲ್ಲದೇ ₹10 ಲಕ್ಷ ಗಳವರೆಗಿನ ನಗದು ಬಹುಮಾನ ಗಿಟ್ಟಿಸಿಕೊಂಡಿದ್ದ ಈ ಟಗರು ಬೈಕು, ಹೋರಿ, ಪ್ರಶಸ್ತಿ ಪತ್ರ...ಹೀಗೆ ಸಾಲು ಸಾಲು ಬಹುಮಾನಗಳನ್ನು ತಂದಿತ್ತು. ₹8 ಲಕ್ಷ  ಬೆಲೆಗೆ ಕೇಳಿದ್ದರೂ ಮಾಲಿಕ ಶೇಬನ್ನವರ ಟಗರು ಮಾರಿರಲಿಲ್ಲ. 6 ವರ್ಷ ವಯಸ್ಸಿನ ಟಗರನ್ನು ನೋಡಲು ಅಭಿಮಾನಿಗಳ ದಂಡೇ ಸೇರುತ್ತಿತ್ತು. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಟಗರು ಸಾವಿಗೀಡಾಗಿದ್ದು ಮಾಲಿಕ ಶೇಬನ್ನವರ ದುಃಖದ ಮಡುವಿನಲ್ಲಿದ್ದಾರೆ.

ಶ್ರದ್ಧಾಂಜಲಿ: ಸೀಗಿಕೇರಿ ಗ್ರಾಮದಲ್ಲಿ ಮೃತ ಟಗರಿಗೆ ಶ್ರದ್ಧಾಂಜಲಿ ನಡೆಯಿತು. ಮಾಲೆ, ಹಣೆಗೆ ಬೆಳ್ಳಿ, ಬಂಗಾರದ ಖಡಗ, ಭಂಡಾರ ಬಳಿದು ಪ್ರಶಸ್ತಿಗಳನ್ನು ಅದರ ಮುಂದಿಟ್ಟು ಊರಿನವರು, ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಅಭಿಮಾನಿಗಳ ಮಹಾಪೂರವೇ ಗ್ರಾಮಕ್ಕೆ ಹರಿದು ಬಂದಿದ್ದು, ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು