ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಫುಟ್‌ಪಾತ್ ತೆರವು, ಸಾರ್ವಜನಿಕರಲ್ಲಿ ಆಕ್ರೋಶ

ರಸ್ತೆ ಸುರಕ್ಷತಾ ಸಮಿತಿ ಗಮನಕ್ಕಿಲ್ಲವೇ ಫುಟ್‌ಪಾತ್ ತೆರವು?
Published 10 ಅಕ್ಟೋಬರ್ 2023, 6:33 IST
Last Updated 10 ಅಕ್ಟೋಬರ್ 2023, 6:33 IST
ಅಕ್ಷರ ಗಾತ್ರ

ಬಾಗಲಕೋಟೆ: ನವನಗರದ ವಿವಿಧೆಡೆ ನಿರ್ಮಿಸಿದ್ದ ಫುಟ್‌ಪಾತ್ ಕಿತ್ತು ಹಾಕುತ್ತಿದ್ದರೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳಲ್ಲಿ ಮೃತ ಪಡುವವರ ಹಾಗೂ ಗಾಯಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದಾಗಲೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಅಪಘಾತ ತಡೆಯಬಹುದಾಗಿದ್ದ ಫುಟ್‌ಪಾತ್‌ ತೆರೆವುಗೊಳಿಸುತ್ತಿರುವುದು ಸರಿಯೇ?

ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾತನಾಡಲಾಗುತ್ತದೆ. ಆದರೆ, ಪಾದಚಾರಿ ಮಾರ್ಗವನ್ನು ಕಿತ್ತು ಹಾಕಿ ಅಪಘಾತಗಳಿಗೆ ಅವಕಾಶ ಮಾಡಿಕೊಡುವ ಕಾಮಗಾರಿ ನಡೆಯುತ್ತಿದ್ದರೂ ಎಲ್ಲರೂ ಮೌನವಾಗಿರುವುದೇಕೇ?

ರಸ್ತೆಗಳಲ್ಲಿ ಫುಟ್‌ಪಾತ್‌ ಕಡ್ಡಾಯ ಎನ್ನುವ ಕಾರಣಕ್ಕೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಫುಟ್‌ಪಾತ್ ನಿರ್ಮಿಸಲಾಗಿತ್ತು. ಆದರೆ, ಈಗ ಅದನ್ನು ತೆರುವುಗೊಳಿಸುತ್ತಿರುವುದರ ಹಿಂದಿರುವ ಉದ್ದೇಶವೇನು ಎಂಬ ಪ್ರಶ್ನೆ ಎದ್ದಿದೆ.

ಫುಟ್‌ಪಾತ್ ಹಾಳಾಗಿದ್ದರೆ, ಹೊಸ ಫುಟ್‌ಪಾತ್ ನಿರ್ಮಾಣ ಮಾಡಲಾಗುತ್ತದೆ. ಆದರೆ, ಇಲ್ಲಿ ಸುಸಜ್ಜಿತವಾಗಿರುವ ಫುಟ್‌ಪಾತ್ ಅನ್ನು ಕಿತ್ತು ಹಾಕಲಾಗುತ್ತಿದೆ. ಅದನ್ನು ರಸ್ತೆಗೆ ಸಮಗೊಳಿಸಲಾಗುತ್ತದೆ. ಫುಟ್‌ಪಾತ್‌ಗೆ ಬಳಸಿರುವ ಕಲ್ಲುಗಳನ್ನೇ ಮತ್ತೆ ಬಳಸಿಕೊಳ್ಳಲಾಗುತ್ತದೆ.

ಎರಡನೇ ಯುನಿಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆದಿವೆ. ಅಲ್ಲಿ ಫುಟ್‌ಪಾತ್ ನಿರ್ಮಿಸದಿರಲು ಬಿಟಿಡಿಎ ಯೋಜಿಸಿದೆ. ಮುಂದಿನ ದಿನಗಳಲ್ಲಿ ಯುನಿಟ್‌ 3ರ ಕಾಮಗಾರಿಗಳು ಸಹ ನಡೆಯಬೇಕಿದೆ. ಬಿಟಿಡಿಎ ಬಾಗಲಕೋಟೆಯ ನವನಗರವನ್ನು ಫುಟ್‌ಪಾತ್ ಇಲ್ಲದ ನಗರವನ್ನಾಗಿಸಲು ಹೊರಟಿದೆಯೇ?

ನವನಗರದಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಜತೆಗೆ ರಸ್ತೆಗಳ ಬದಿಯಲ್ಲಿ ತಿರುಗಾಡುವವರ ಸಂಖ್ಯೆಯೂ ಹೆಚ್ಚುತ್ತದೆ. ಆಗ ಅವರು ಅನಿವಾರ್ಯವಾಗಿ ರಸ್ತೆಯಲ್ಲಿಯೇ ಸಂಚರಿಸಬೇಕಾಗುತ್ತದೆ. ಇದು ಅವರ ಪ್ರಾಣಕ್ಕೆ ಸಂಚಕಾರ ತಂದೊಡ್ಡಬಹುದು.

ಅಭಿಪ್ರಾಯಗಳು ಅವೈಜ್ಞಾನಿಕ

ಕಾಮಗಾರಿ ಕುರಿತು ಪ್ರತಿಕ್ರಿಯಿಸಲು ಶಬ್ದಗಳೇ ಸಾಲುತ್ತಿಲ್ಲ. ಈ ಕಾಮಗಾರಿ ಜನತೆಯ ಅನುಕೂಲಕ್ಕೋ ಇಲ್ಲ ಹಣ ಕೊಳ್ಳೆ ಹೊಡೆಯಲೋ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆ ಸಾರ್ವಜನಿಕರಿಗೆ ತಿಳಿಸಬೇಕು. ಫುಟ್‌ಪಾತ್ ನಿರ್ಮಿಸಬೇಕಾದವರೇ ಒಡೆದು ನೆಲಸಮಗೊಳಿಸಿದರೆ ಹೇಗೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆರಮೇಶ್ ಬದ್ನೂರ ವಕೀಲರು ನವನಗರದಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಕಡ್ಡಾಯವಾಗಿ ಪುಟ್‌ಪಾತ್ ನಿರ್ಮಿಸಲಾಗಿತ್ತು. ಇದರಿಂದ ಪಾದಚಾರಿಗಳಿಗೆ ಅನುಕೂಲವಾಗಿತ್ತು. ಈಗ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರದ ಅನುದಾನ ಅನಾವಶ್ಯಕವಾಗಿ ಪೋಲಾಗುತ್ತಿದೆ. ಫುಟ್‌ಪಾತ್ ಮರು ನಿರ್ಮಾಣ ಮಾಡಲು ಕ್ರಮಕೈಗೊಳ್ಳುವ ಮೂಲಕ ಪಾದಚಾರಿಗಳಿಗೆ ಅನುಕೂಲ ಒದಗಿಸಿಕೊಡಬೇಕುಮುತ್ತಣ್ಣ ಬೆಣ್ಣೂರ ನಿವಾಸಿ

ವೈಜ್ಞಾನಿಕ ಕಾಮಗಾರಿ ಕುರಿತು ಪ್ರತಿಕ್ರಿಯಿಸಲು ಶಬ್ದಗಳೇ ಸಾಲುತ್ತಿಲ್ಲ. ಈ ಕಾಮಗಾರಿ ಜನತೆಯ ಅನುಕೂಲಕ್ಕೋ ಇಲ್ಲ, ಹಣ ಕೊಳ್ಳೆ ಹೊಡೆಯಲೋ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆ ಸಾರ್ವಜನಿಕರಿಗೆ ತಿಳಿಸಬೇಕು. ಫುಟ್‌ಪಾತ್ ನಿರ್ಮಿಸಬೇಕಾದವರೇ ಒಡೆದು ನೆಲಸಮಗೊಳಿಸಿದರೆ ಹೇಗೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
-ರಮೇಶ್ ಬದ್ನೂರ, ವಕೀಲರು
ನವನಗರದಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಕಡ್ಡಾಯವಾಗಿ ಪುಟ್‌ಪಾತ್ ನಿರ್ಮಿಸಲಾಗಿತ್ತು. ಇದರಿಂದ ಪಾದಚಾರಿಗಳಿಗೆ ಅನುಕೂಲವಾಗಿತ್ತು. ಈಗ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರದ ಅನುದಾನ ಅನಾವಶ್ಯಕವಾಗಿ ಪೋಲಾಗುತ್ತಿದೆ. ಫುಟ್‌ಪಾತ್ ಮರು ನಿರ್ಮಾಣ ಮಾಡಲು ಕ್ರಮಕೈಗೊಳ್ಳುವ ಮೂಲಕ ಪಾದಚಾರಿಗಳಿಗೆ ಅನುಕೂಲ ಒದಗಿಸಿಕೊಡಬೇಕು
-ಮುತ್ತಣ್ಣ ಬೆಣ್ಣೂರ, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT