ಗುರುವಾರ , ಜುಲೈ 29, 2021
23 °C

ಲೋಕಾಪುರ: ₹ 12.60 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಮೂವರು ಮನೆಗಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ಮುಧೋಳ ತಾಲ್ಲೂಕು ಲೋಕಾಪುರ ಠಾಣೆಯ ಪೊಲೀಸರು ಅವರಿಂದ ₹11,02 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣ, ₹1,58 ಲಕ್ಷ ಮೌಲ್ಯದ 2260 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದ ಸಿದ್ದು ಹಾದಿಮನಿ (ಜಿಮ್ಮಿ) ಕಲ್ಮೇಶ ರಾನವ್ವಗೋಳ (ಮಟ್ಯಾ) ಹಾಗೂ ಮುತ್ತಪ್ಪ ಪೂಜಾರಿ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್‌ಬೈಕ್ ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕಳ್ಳತನದ ವಿವರ: ಕಳೆದ ಮೇ 25ರಂದು ನಸುಕಿನಲ್ಲಿ ಲೋಕಾಪುರದ ನಿವಾಸಿ ಶ್ರೀನಿವಾಸ ನಿಂಗನೂರ ಅವರ ಮನೆಯ ಹಿಂಭಾಗದಿಂದ ನಿಚ್ಚಣಕಿ (ಏಣಿ) ಸಹಾಯದಿಂದ ಒಳಗೆ ಪ್ರವೇಶಿಸಿದ್ದ ಕಳ್ಳರು ಮಲಗುವ ಕೋಣೆಯಲ್ಲಿದ್ದ ಟ್ರೆಜರಿ ತೆರೆದು ಅದರಲ್ಲಿ ಇಡಲಾಗಿದ್ದ ₹12,25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ ₹1.26 ಲಕ್ಷ ಮೌಲ್ಯದ 1810 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಶ್ರೀನಿವಾಸ ನಿಂಗನೂರು ಅದೇ ದಿನ ಸಂಜೆ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ತನಿಖೆಗೆ ಮುಧೋಳ ವೃತ್ತ ನಿರೀಕ್ಷಕ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಕಳ್ಳತನ ಮಾಡಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು