ಗುಳೇದಗುಡ್ಡ: ‘ಜೇನು ಸಾಕಾಣಿಕೆ ರೈತರಿಗೆ ಉಪಕಸುಬಾಗಿದ್ದು, ಕೃಷಿಯೊಂದಿಗೆ ಜೇನು ಸಾಕಾಣಿಕೆ ಮಾಡುವುದರಿಂದ ಲಾಭದ ಜೊತೆಗೆ ಬೆಳೆಗಳ ಇಳುವರಿಯೂ ಹೆಚ್ಚುತ್ತದೆ. ಕೃಷಿಕರಿಗೆ ವರದಾನವಾದ ಜೇನು ಕೃಷಿಯನ್ನು ತೋಟಗಾರಿಕಾ ಬೆಳೆಗಳೊಂದಿಗೆ ಕೈಗೊಳ್ಳಬೇಕು’ ಎಂದು ತೋಟಗಾರಿಕಾ ವಿ.ವಿಯ ವಿಸ್ತರಣಾ ನಿರ್ದೇಶಕ ಪ್ರೊ.ವೆಂಕಟೇಶಲು ಬಿ ಹೇಳಿದರು.

ತಾಲ್ಲೂಕಿನ ಇಂಜನವಾರಿ ಗ್ರಾಮದ ಜೇನು ಕೃಷಿಕ ತಿಪ್ಪಣ್ಣ ಗೌಡರ ಅವರ ತೋಟದಲ್ಲಿ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿವಿ, ಸಿಬಿಬಿಒ ವಿಸ್ತರಣಾ ನಿರ್ದೇಶನಾಲಯ ಬಾಗಲಕೋಟ ಹಾಗೂ ಮಕರಂದ ಜೇನು ಕೃಷಿ ರೈತ ಉತ್ಪಾದಕರ ಕಂ.ಬಾಗಲಕೊಟೆ ಆಶ್ರಯದಲ್ಲಿ ಈಚೆಗೆ ನಡೆದ ವಿಶ್ವ ಜೇನು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜೇನು ಜೊತೆಗೆ ಜೇನಿನ ಉಪ ಉತ್ಪನ್ನಗಳು ಕೃಷಿಕರಿಗೆ ಉತ್ತಮ ಆದಾಯ ನೀಡುತ್ತವೆ. ರೈತರು ಜೇನು ಸಾಕಾಣಿಕೆ ಕಸಬು ಕೈಗೊಳ್ಳುವ ಮೂಲಕ ತಮ್ಮ ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳಬೇಕು’ ಎಂದರು.

ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ.ಸತ್ಯನಾರಾಯಣ ಸಿ, ಪ್ರೊ. ರಾಮನಗೌಡ ಎಚ್., ಬಸನಗೌಡ ಗೌಡರ, ವೀರಯ್ಯಸ್ವಾಮಿ ಸೂಳಿಕೇರಿ, ಶ್ರೀಪಾದ ವಿಶ್ವೇಶ್ವರ, ಜೇನು ಕೃಷಿ ರೈತ ತಿಪ್ಪಣ್ಣ ಗೌಡರ, ಪ್ರಶಾಂತ ನಾಯಕ, ಪುಷ್ಪಾ ಅಂಗಡಿ, ಧರಿಯಪ್ಪ ಕಿತ್ತೂರ, ಮಹಾದೇವ ನಾಯಕ, ವೆಂಕಣ್ಣ ದೇಸಾಯಿ, ರಾಜಗುರು ಹಿರೇಮಠ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.