ಕುಳಗೇರಿ ಕ್ರಾಸ್: ಸಮೀಪದ ಗೋವನಕೊಪ್ಪ ಗ್ರಾಮದ ಗುರು ಬ್ರಹ್ಮಾನಂದ ಸ್ವಾಮೀಜಿ 88ನೇ ಜಾತ್ರಾ ಮಹೋತ್ಸವ ಹಾಗೂ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಡಿ.21ರಿಂದ 30ರ ವರೆಗೆ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿದೆ.

ಡಿ.21ರಂದು ನಡೆಯುವ ‘ಜೀವನ ದರ್ಶನ ಪ್ರವಚನ’ ಕಾರ್ಯಕ್ರಮದ ಸಾನ್ನಿಧ್ಯವನ್ನು ಕೆರೂರ ಚರಂತಿಮಠದ ಶಿವುಕುಮಾರ ಸ್ವಾಮೀಜಿ, ನರಸಾಪುರ ಹಿರೇಮಠದ ಮರುಳಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವರು, ಕಲಬುರಗಿ ಜಿಲ್ಲೆಯ ಜೇರಟಗಿ ಗ್ರಾಮದ ಮಡಿವಾಳಯ್ಯ ಶಾಸ್ತ್ರೀಗಳು ಪ್ರವಚನಕಾರರಾಗಿ, ಸಂಗೀತಗಾರರಾಗಿ ವೀರಭದ್ರಯ್ಯ ಸ್ವಾಮೀಜಿ, ರಾಜಶೇಖರ ತಬಲಾ ಸೇವೆಯಲ್ಲಿ ಭಾಗವಹಿಸಲಿದ್ದಾರೆ.

ಕೊಣ್ಣೂರ ವಿರಕ್ತಮಠದ ಚನ್ನವೀರೇಶ್ವರ ಸ್ವಾಮೀಜಿ, ಕಿತ್ತಲಿ ಸಿದ್ರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ, ಕೊಣ್ಣೂರ ಕಲ್ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಣಕವಾಡದ ಗುರು ಅನ್ನದಾನೇಶ್ವರಿ ದೇವಮಂದಿರ ಮಹಾಮಠದ ಮೃತ್ಯುಂಜಯ್ಯ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ, ಗದಗ-ಡಂಬಳ ತೋಂಟದಾರ್ಯ ಸಂಸ್ಥಾನಮಠದ ಡಾ: ತೋಂಟದ ಸಿದ್ದರಾಮ ಸ್ವಾಮೀಜಿ ಭಾಗವಹಿಸುವರು.

ಡಿ.29ರಂದು ಸಂಜೆ 6ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು ಹಾಗೂ ಚನ್ನಮ್ಮನ ಕಿತ್ತೂರ ಮಡಿವಾಳೇಶ್ವರ ಮಠ ದೇವ ರಶೀಗಿಹಳ್ಳಿ ಅವರು ಸಾನ್ನಿಧ್ಯ ವಹಿಸುವರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಜೆ.ಡಿ.ಎಸ್. ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ ಸೇರಿದಂತೆ ಇತರರು ಪಾಲ್ಗೊಳ್ಳುವರು.

ಡಿ.30ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನರಸಾಪುರ ಹಿರೇಮಠದ ಮರುಳಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೊಳೆ ಆಲೂರು ಯಚ್ಚರೇಶ್ವರ ಮಠದ ಯಚ್ಚರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಜೆ 5 ಗಂಟೆಗೆ ಗುರು ಬ್ರಹ್ಮಾನಂದ ಸ್ವಾಮೀಜಿ ಮಹಾರಥೋತ್ಸವ ಜರುಗಲಿದೆ ಎಂದು ಜಾತ್ರಾ ಮಹೋತ್ಸವದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಡಿ. ಬಿಜಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.