ಬಾಗಲಕೋಟೆ: ಕಳೆದ ವರ್ಷ ಹೆಸರುಕಾಳು ಬೆಂಬಲ ಬೆಲೆಗಿಂತ ಕಡಿಮೆಗೆ ಮಾರಾಟವಾಗಿ, ರೈತರಿಗೆ ನಷ್ಟವಾಗಿತ್ತು. ಈ ಬಾರಿ ಉತ್ತಮ ಬೆಲೆಯಿದೆ. ಹೆಸರುಕಾಳು ಪ್ರತಿ ಕ್ವಿಂಟಲ್ ದರ ಸರಾಸರಿ ₹9,605 ಇದ್ದರೆ, ಉತ್ತಮ ಹೆಸರುಕಾಳು ದರ ಪ್ರತಿ ಕ್ವಿಂಟಲ್ಗೆ ₹10,059 ಇದೆ. ಕಳೆದ ವರ್ಷ ದರ ಕ್ವಿಂಟಲ್ಗೆ ₹7,500 ಇತ್ತು.

ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಬರುತ್ತಿರುವ ಹೆಸರುಕಾಳಿಗೆ ಹೆಚ್ಚಿನ ಬೇಡಿಕೆಯಿದೆ. ಅದು ಮಹಾರಾಷ್ಟ್ರ, ತಮಿಳುನಾಡಿಗೂ ಪೂರೈಕೆಯಾಗುತ್ತದೆ. ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹೆಸರುಕಾಳು ಬಿತ್ತನೆಯಾಗಿದೆ.

‘ಎಪಿಎಂಸಿಗೆ ನಿತ್ಯ 2 ಸಾವಿರ ಕ್ವಿಂಟಲ್ಗೂ ಹೆಚ್ಚು ಹೆಸರುಕಾಳು ಆವಕವಾಗುತ್ತಿದೆ. ಸತತ ಮಳೆ ಕಾರಣ ರೈತರಿಗೆ ಹೆಸರುಕಾಳಿನ ರಾಶಿ ಮಾಡಲು ಸಾಧ್ಯವಾಗಿಲ್ಲ. ಮುಂದೆ ಆವಕ ಹೆಚ್ಚಾದಾಗ, ಬೆಲೆ ಹೇಗಿರುತ್ತದೆ ನೋಡಬೇಕು’ ಎಂದು ಎಪಿಎಂಸಿ ವ್ಯಾಪಾರಿ ಮಲ್ಲಿಕಾರ್ಜುನ ತಿಳಿಸಿದರು.

‘ಎಪಿಎಂಸಿಯಲ್ಲಿ ಹೆಸರುಕಾಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಂತಸ ತಂದಿದೆ. ಮುಂದೆ ಆವಕ ಹೆಚ್ಚಾದಾಗ ಬೆಲೆ ಕುಸಿಯಬಹುದು. ಸರ್ಕಾರ ಈಗಲೇ ಬೆಂಬಲ ಬೆಲೆಯಡಿ ಖರೀದಿಗೆ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಶಿರೂರಿನ ರೈತ ಶಿವಕುಮಾರ ರಡ್ಡಿ ಹೇಳಿದರು.

ಹೆಸರುಕಾಳು ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ಇನ್ನೊಂದೆಡೆ ಮುಂಜಾಗ್ರತೆಯಾಗಿ ಬೆಂಬಲ ಬೆಲೆಯಡಿ ಖರೀದಿಸಲೂ ಅಗತ್ಯ ಸಿದ್ಧತೆ ನಡೆದಿದೆ
ವಿ.ಡಿ. ಪಾಟೀಲ ಕಾರ್ಯದರ್ಶಿ ಎಪಿಎಂಸಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.