ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ ಪುರಸಭೆ ಬಜೆಟ್‌ ಅನುಮೋದನೆ

Published 27 ಫೆಬ್ರುವರಿ 2024, 16:25 IST
Last Updated 27 ಫೆಬ್ರುವರಿ 2024, 16:25 IST
ಅಕ್ಷರ ಗಾತ್ರ

ಗುಳೇದಗುಡ್ಡ : ಪಟ್ಟಣದ ಪುರಸಭೆಯ 2024-25 ನೇ ಸಾಲಿನ ಬಜೆಟ್‍ಗೆ ಪುರಸಭೆ ಆಡಳಿತಾಧಿಕಾರಿ ಶ್ರವಣ ನಾಯಕ ಮಂಗಳವಾರ ಅನುಮೋದನೆ ನೀಡಿ ಠರಾವು ಅಂಗೀಕರಿಸಿದರು.

ಪುರಸಭೆಗೆ ಒಟ್ಟು ಆದಾಯದ ಮೂಲಗಳಿಂದ ಆಗುವ ಜಮೆಗಳು ₹19.40 ಕೋಟಿ ಆಗಿದ್ದು  ಒಟ್ಟು ವೆಚ್ಚಗಳು ₹19.36 ಕೋಟಿ. ಹೀಗಾಗಿ ಒಟ್ಟಾರೆ ಉಳಿತಾಯ ₹ 4 ಲಕ್ಷ ಆಗಿದೆ  ಎಂದು  ಆಡಳಿತಾಧಿಕಾರಿ ತಿಳಿಸಿದರು.

ಘನತ್ಯಾಜ್ಯ ನಿರ್ವಹಣೆಗೆ ₹ 80 ಲಕ್ಷಗಳು, ಕಟ್ಟಡ ನಿರ್ಮಾಣ ಕಾಮಗಾರಿಗೆ ₹ 65 ಲಕ್ಷ,  ರಸ್ತೆ, ಪಾದಚಾರಿ ರಸ್ತೆ, ತಡೆಗೋಡೆ, ಚರಂಡಿ ಅಭಿವೃದ್ಧಿಗಾಗಿ ₹ 2 ಕೋಟಿ ₹ 37 ಲಕ್ಷಗಳು, ಬೀದಿ ದೀಪ ಕಾಮಗಾರಿಗೆ ₹ 20 ಲಕ್ಷಗಳು, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ₹ 3 ಲಕ್ಷಗಳು, ಒಳಚರಂಡಿ ಅಭಿವೃದ್ಧಿಗೆ ₹ 89 ಲಕ್ಷ, ನೀರು ಸರಬರಾಜು ಹಾಗೂ ಯಂತ್ರೋಪಕರಣಗಳ ಖರೀದಿಗಾಗಿ ₹ 59 ಲಕ್ಷ, ಎಸ್ಸಿ, ಎಸ್ಟಿ, ಹಿಂ.ವ. ಹಾಗೂ ಅಂಗವಿಕಲರ ಅಭಿವೃದ್ಧಿಗಳಗಾಗಿ ₹30 .50 ಲಕ್ಷ , ಸ್ವಚ್ಚ ಭಾರತ ಅನುಷ್ಠಾನ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ₹ 5 ಲಕ್ಷ, ಹಾಗೂ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 61.60 ಲಕ್ಷಗಳನ್ನು ಕಾಯ್ದಿರಿಸಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ.ಎಫ್. ಮುಜಾವರ್,  ವ್ಯವಸ್ಥಾಪಕ ಮುದ್ದೇಬಿಹಾಳ, ಲೆಕ್ಕ ಶಾಖೆ ವಿಭಾಗದ ಸಹಾಯಕ ನಾಗರಾಜ ಕಟ್ಟಿಮನಿ ಇದ್ದರು.

ಗುಳೇದಗುಡ್ಡ ಪುರಸಭೆ
ಗುಳೇದಗುಡ್ಡ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT