ಗುಳೇದಗುಡ್ಡ: ಗ್ರಾಮಗಳು ದೇಶದ ಜೀವಾಳ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ಹೇಳಿದರು.

ತಾಲ್ಲೂಕಿನ ಹಳದೂರ ಗ್ರಾ.ಪಂ. ವ್ಯಾಪ್ತಿಯ ಅಲ್ಲೂರ ಎಸ್ ಪಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ ಸಂಜೀವಿನಿ ಕಟ್ಟಡ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಆ ನಿಟ್ಟಿನಲ್ಲಿ ಸಂಜೀವಿನಿ ಕಟ್ಟಡ ಅವಶ್ಯಕತೆ ಇತ್ತು. ಈಗ ಸರ್ಕಾರ ಪಂಚಾಯಿತಿ ಮೂಲಕ ಅನುಕೂಲ ಮಾಡಿ ಕೊಟ್ಟಿರುವುದರಿಂದ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಚಂದ್ರ ಮೈತ್ರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಹಲವು ಅಭಿವೃದ್ಧಿ ಕೆಲಸ ನೀಡಿದೆ ವಿಶೇಷವಾಗಿ ನರೇಗಾ ಯೋಜನೆ ಮಹತ್ವಪೂರ್ಣವಾಗಿವೆ. ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಮಾಡಿ ಸಮಾಜದಲ್ಲಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು.

ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿ, ಗ್ರಾಮಗಳಲ್ಲಿನ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಜೊತೆಗೆ ಗ್ರಾಮಗಳು ಮೂಲ ಸೌಲಭ್ಯಗಳನ್ನು ಹೊಂದಬೇಕು. ಆ ದಿಸೆಯಲ್ಲಿ ಸರ್ಕಾರ ಉತ್ತಮವಾದ ಸೌಲಭ್ಯ ನೀಡುತ್ತಿದೆ ಎಂದರು.

₹17 ಲಕ್ಷ ವೆಚ್ಚದಲ್ಲಿ ಸ್ವಚ್ಛತಾ ಸಂಕೀರ್ಣ, ₹6 ಲಕ್ಷ ವೆಚ್ಚದಲ್ಲಿ ಬಿಸಿಯೂಟ ಅಡುಗೆ ಕೋಣೆಯ ಹೊಸ ಕಟ್ಟಡಗಳನ್ನು ಉದ್ಘಾಟಿಸಲಾಯಿತು. ಸ್ವ ಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೋಗ ಕ್ಯೆಗೊಳ್ಳಲು 5 ಸಂಘಗಳಿಗೆ ಸಾಲದ ಚೆಕ್ ವಿತರಿಸಲಾಯಿತು. ಮತದಾನ ಜಾಗೃತಿ ಮೂಡಿಸುವ ಮತದಾನ ಪ್ರತಿಜ್ಞೆ ವಿಧಿಯನ್ನು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ಬೋಧಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮವ್ವ ಉಳ್ಳಾಗಡ್ಡಿ, ಉಪಾಧ್ಯಕ್ಷ ಹನಮಂತ ದನದಮನಿ, ಪಿಡಿಒ ಗೂಳಪ್ಪ ಹೊರಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಈರಯ್ಯ ಹೊಸಮಠ, ಮುತ್ತವ್ವ ಕೊಳಮಲಿ ಇದ್ದರು.