ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರ್ಷಿತಾ ರವೀಂದ್ರ ವೇಗದ ಓಟಗಾರ್ತಿ

ಶ್ರವಣದೋಷವುಳ್ಳವರ ರಾಜ್ಯಮಟ್ಟದ 14ನೇ ಕ್ರೀಡಾಕೂಟ
Published : 27 ಸೆಪ್ಟೆಂಬರ್ 2024, 21:33 IST
Last Updated : 27 ಸೆಪ್ಟೆಂಬರ್ 2024, 21:33 IST
ಫಾಲೋ ಮಾಡಿ
Comments

ಬಾಗಲಕೋಟೆ: ದಕ್ಷಿಣ ಕನ್ನಡ ಜಿಲ್ಲೆಯ ಹರ್ಷಿತಾ ರವೀಂದ್ರ ಮತ್ತು ಬಾಗಲಕೋಟೆಯ ಮಹಾಂತೇಶಯ್ಯ ಅವರು ಕ್ರಮವಾಗಿ ಇಲ್ಲಿ ನಡೆಯುತ್ತಿರುವ ರಾಜ್ಯ ಶ್ರವಣದೋಷವುಳ್ಳವರ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀ ಮತ್ತು ಪುರುಷರ 1500 ಮೀ ಓಟದಲ್ಲಿ ಮೊದಲ ಸ್ಥಾನ ಗಳಿಸಿದರು. 

ಕರ್ನಾಟಕ ಶ್ರವಣದೋಷವುಳ್ಳವರ ಕ್ರೀಡಾ ಒಕ್ಕೂಟ, ಬಾಗಲಕೋಟೆ ಜಿಲ್ಲಾ ಶ್ರವಣದೋಷವುಳ್ಳವರ ಸಂಘದ ಸಹಯೋಗದಲ್ಲಿ ಶುಕ್ರವಾರ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಈ ಕೂಟದ ಪ್ರತಿಯೊಂದು ವಿಭಾಗದಲ್ಲಿ  ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು; 

ಪುರುಷರು: 1,500 ಮೀ. ಓಟ: ಮಹಾಂತೇಶಯ್ಯ ಎಸ್. (ಬಾಗಲಕೋಟೆ), ಸಲ್ಮಾನ್ ಖಾನ್ ಕಾಕಡ (ಧಾರವಾಡ), ಪ್ರಥಮೇಶ ಬಡಿಗೇರ (ಮೈಸೂರು). ಶಾಟ್‍ಪಟ್: ಯೋಗೇಶ ಉಮರಾಣಿ (ಬೆಳಗಾವಿ), ತಿರುಪತಿ ರಾಜು (ಬೆಂಗಳೂರು), ನಾಗೇಶ್ ಎಸ್. (ಮೈಸೂರು). ಡಿಸ್ಕಸ್ ಥ್ರೋ: ಎಂ.ಸಿ.ಚೇತನ್ (ಮೈಸೂರು), ನಾಗೇಶ್ ಎಸ್. (ಮೈಸೂರು), ಆಕಾಶ್ ಎಚ್. (ಬೆಂಗಳೂರು). 400 ಮೀ.ಓಟ: ಹರ್ಷ (ಮೈಸೂರು), ಯುವರಾಜ್ ಎಲ್. (ಮೈಸೂರು), ಮಿಥುನ್ ಗೌಡ (ಮಂಡ್ಯ).

ಮಹಿಳೆಯರು: 100 ಮೀ.ಓಟ: ಹರ್ಷಿತಾ ರವೀಂದ್ರ (ದಕ್ಷಿಣ ಕನ್ನಡ), ಆಗ್ನೇಸ್ ಜೋಸ್ (ಮೈಸೂರು), ಪವಿತ್ರಾ ತೇಲಿ (ಬಾಗಲಕೋಟೆ).  1500 ಮೀ.ಓಟ: ತನುಜಾ (ಬೆಂಗಳೂರು), ಮಹಾಲಕ್ಷ್ಮೀ (ಬೆಂಗಳೂರು). ಉದ್ದ ಜಿಗಿತ: ಹರ್ಷಿತಾ ರವೀಂದ್ರ (ದಕ್ಷಿಣ ಕನ್ನಡ), ಅಗ್ನೇಸ್ ಜೋಸ್ (ಮೈಸೂರು), ಸ್ನೇಹಾ (ಬೆಂಗಳೂರು). . ಶಾಟ್‍ಪಟ್: ಫರ್ಜಾನಾ ಬಾನು (ಬೆಂಗಳೂರು), ಕಮಲಾ ಹೊನ್ನಪ್ಪಗೋಳ (ಬಾಗಲಕೋಟೆ), ರಾಧಿಕಾ ಪಿ. (ರಾಮನಗರ). 400 ಮೀ.ಓಟ: ಪವಿತ್ರಾ ತೇಲಿ (ಬಾಗಲಕೋಟೆ), ಕಾವೇರಿ ಪೂಜೇರಿ (ಬೆಳಗಾವಿ), ದರ್ಶಿನಿ (ಬೆಂಗಳೂರು).

16 ರಿಂದ 18 ವರ್ಷದೊಳಗಿನ ಬಾಲಕರು: 1500 ಮೀ.ಓಟ: ಲಿಖಿತ ಗೌಡ (ತುಮಕೂರು), ಶಿವಶಂಕರ ಜಿ.ಎಂ. (ಮೈಸೂರು), ರಾಜೇಶ ಕುಮಾರ್ (ದಾವಣಗೆರೆ). 400 ಮೀ. ಓಟ: ನಿಕ್ಷಿತ್ ಡಿ.ಕೆ. (ಮೈಸೂರು), ತಿಪ್ಪೆಸ್ವಾಮಿ (ದಾವಣಗೆರೆ), ಬಾಲಾಜಿ ಎಚ್.ಎಸ್. (ಮಂಡ್ಯ) 

16 ರಿಂದ 18 ವರ್ಷದ ಬಾಲಕಿಯರು: 400 ಮೀ.ಓಟ: ಯುಕ್ತಾ ಎನ್.ಪಿ.(ಮೈಸೂರು), ಶಿಲ್ಪಾ ಬಿ. (ಬೆಂಗಳೂರು), ವರ್ಷಿಣಿ ಎಂ. (ಬೆಂಗಳೂರು). 12 ರಿಂದ 14 ವರ್ಷದೊಳಗಿನ ಪುರುಷರ 600 ಮೀ.ಓಟ: ವಿಜಯ ಜಡಗಪ್ಪಗೋಳ (ಬೆಳಗಾವಿ), ಗೌತಮ್ ಬಿ.(ಮಂಡ್ಯದ), ಯಶವಂತ ಎಸ್. (ಮೈಸೂರು).

12 ರಿಂದ 14 ವರ್ಷದೊಳಗಿನ ಬಾಲಕಿಯರು: 600 ಮೀ.ಓಟ: ಪ್ರಿಯಾಂಕಾ ಜಿ. (ಬೆಂಗಳೂರು), ಸವಿತಾ ಕುರಿ (ಬೆಳಗಾವಿ), ಸಂಜನಾ ಎಸ್ (ಬೆಂಗಳೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT