ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿತ್ತುವುದು ಹೊಸ ಶಿಕ್ಷಣ ನೀತಿಯೇ?–ಎಚ್.ಡಿ.ಕುಮಾರಸ್ವಾಮಿ

Last Updated 5 ಜೂನ್ 2022, 9:27 IST
ಅಕ್ಷರ ಗಾತ್ರ

ಬಾಗಲಕೋಟೆ: ಧರ್ಮದ‌ ಹೆಸರಿನಲ್ಲಿ ಏನೂ ಅರಿಯದ ಮಕ್ಕಳಲ್ಲಿ ದ್ವೇಷ ಬಿತ್ತುವುದೇ ಹೊಸ ಶಿಕ್ಷಣ ನೀತಿಯೇ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತ‌ಡಿದ ಅವರು, ಪಠ್ಯ ಪರಿಷ್ಕರಣೆ ಸಮಿತಿ ಮೂಲಕ ಗೊಂದಲ ಸೃಷ್ಟಿ ಮಾಡುವುದು ಹೊಸ ಶಿಕ್ಷಣ ನೀತಿ ಭಾಗವಾಗಿದೆ‌ ಎಂದು ಟೀಕಿಸಿದರು.

ಬಸವಣ್ಣ, ಕುವೆಂಪು‌ ಅವರಿಗೆ ಅವಮಾನ ಮಾಡಲಾಗುತ್ತಿದೆ. ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸಲಾಗುತ್ತಿದೆ. ಮಕ್ಕಳನ್ನು ಶಾಲೆಗೆ‌ ಕಳುಹಿಸಲು ಪೋಷಕರು ಆತಂಕ ಪಡುವ‌ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಚಡ್ಡಿ ಸುಡುವ ಹಾಗೂ ಚಡ್ಡಿ ಬಿಚ್ಚುವ ಮಾತನ್ನು ಕಾಂಗ್ರೆಸ್, ಬಿಜೆಪಿ ನಾಯಕರು ಆಡುತ್ತಿದ್ದಾರೆ. ನಿಮ್ಮ ಹೃದಯದಲ್ಲಿರುವ ಸಂಘರ್ಷದ ಕಿಚ್ಚಿಗೆ ಬೆಂಕಿ ಹಚ್ಚಿರಿ. ನಾಡಿನ ಜನತೆಯ ಚಡ್ಡಿ ಬಿಚ್ಚಿಸುವ ಕೆಲಸ ನಾಡಿನಲ್ಲಿ ಆಗಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT