ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಈಶ್ವರಪ್ಪ ಯಾರು? ಗೊತ್ತಿಲ್ಲ’: ರಾಧಾಮೋಹನದಾಸ್ ಅಗರವಾಲ್

Published 16 ಏಪ್ರಿಲ್ 2024, 16:30 IST
Last Updated 16 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಈಶ್ವರಪ್ಪ ಯಾರು ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್  ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪ ಬಂಡಾಯದ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಯಾರು ಈಶ್ವರಪ್ಪ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಈ ರೀತಿ ಹೇಳುವುದು ಪಕ್ಷಕ್ಕಾಗಿ ದುಡಿದವರಿಗೆ ಅವಮಾನಿಸಿದಂತಲ್ಲವೇ?’ ಎಂಬ ಪ್ರಶ್ನೆಗೆ ‘ವ್ಯಕ್ತಿಗೆ ಹೆಸರಿನಿಂದ ಅವಮಾನ ಆಗುವುದಿಲ್ಲ. ಆತ ಮಾಡಿದ ಕೆಲಸದಿಂದ ಆಗುತ್ತದೆ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಪರಿಸ್ಥಿತಿಯಲ್ಲೂ ಪಕ್ಷದ ಜೊತೆಗೆ ಇರುತ್ತಾರೆ’ ಎಂದು ರಾಧಾಮೋಹನದಾಸ್ ಹೇಳಿದರು.

ಮೋದಿ ಅವರ ಭಾವಚಿತ್ರ ಈಶ್ವರಪ್ಪ ಬಳಸಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಅಗರವಾಲ್, ‘ಈ ಬಗ್ಗೆ ಕ್ರಮ ಜರುಗಿಸುವುದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯ. ಪಕ್ಷದ ವಿರುದ್ಧ ಬಂಡೆದ್ದು ಅದೇ ಪಕ್ಷದ ನಾಯಕನ ಚಿತ್ರ ಬಳಸಿ ಪ್ರಚಾರ ನಡೆಸುವುದು ಚುನಾವಣೆ ನಿಯಮಕ್ಕೆ ವಿರುದ್ಧವಾದದ್ದು. ಇದು ಜನರನ್ನು ವಂಚಿಸುವ ಕೆಲಸ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT