ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

Published 10 ಜುಲೈ 2024, 14:40 IST
Last Updated 10 ಜುಲೈ 2024, 14:40 IST
ಅಕ್ಷರ ಗಾತ್ರ

ಇಳಕಲ್‌: ‘ಬಡವರಿಗೆ, ಕೂಲಿಕಾರರಿಗೆ ರಿಯಾಯ್ತಿ ದರದಲ್ಲಿ ಊಟ, ಉಪಹಾರ ನೀಡುವ ಇಂದಿರಾ ಕ್ಯಾಂಟಿನ್‌ ಹುನಗುಂದದಲ್ಲಿ ಮಂಜೂರಾಗಿದ್ದರೂ, ಹಿಂದಿನ ಸರ್ಕಾರ ಹಾಗೂ ಆಗಿನ ಶಾಸಕರು ದುರುದ್ದೇಶದಿಂದ ಆರಂಭಿಸಿರಲಿಲ್ಲ’ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

ಅವರು ಮಂಗಳವಾರ ಇಲ್ಲಿಯ ಪೊಲೀಸ್‌ ಠಾಣೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕೆಲವೇ ತಿಂಗಳುಗಳಲ್ಲಿ ಕ್ಯಾಂಟಿನ್‌ ಅರಂಭವಾಗಲಿದೆ. ಕೇವಲ ₹ 5 ಮತ್ತು ₹ 10 ಕ್ಕೆ ಉಪಾಹಾರ ಹಾಗೂ ಊಟ ನೀಡುವ ಈ ಯೋಜನೆ ಬಡವರಿಗೆ ಅತ್ಯಂತ ಉಪಯುಕ್ತವಾಗಿದೆ’ ಎಂದರು.

ಪೌರಾಯುಕ್ತ ಶ್ರೀನಿವಾಸ ಜಾಧವ, ನಗರಸಭೆ ಸದಸ್ಯರಾದ ಅಮೃತ್‌ ಬಿಜ್ಜಳ, ಮೌಲಪ್ಪ ಬಂಡಿವಡ್ಡರ್‌, ಸುಧಾರಾಣಿ ಸಂಗಮ, ಅಬ್ಬು ಹಳ್ಳಿ, ಮಲ್ಲು ಮಡಿವಾಳರ, ಮುಖಂಡರಾದ ಮಹಾಂತೇಶ ನರಗುಂದ, ಮಲ್ಲಿಕಾರ್ಜುನ ಅಗ್ನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT