ಬಾಗಲಕೋಟೆ: ‘ಜ್ಯೋತಿ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಕಳೆದ ಹಣಕಾಸು ವರ್ಷದಲ್ಲಿ ₹1.14 ಕೋಟಿ ಲಾಭ ಗಳಿಸಿದ್ದು, ಶೇ 10ರಷ್ಟು ಲಾಭಾಂಶ ಹಂಚಿಕೆ ಮಾಡಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಸಿದ್ದಣ್ಣ ಕಾಖಂಡಕಿ ಹೇಳಿದರು.

ಇಲ್ಲಿನ ನವನಗರದಲ್ಲಿರುವ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ನಡೆದ 29ನೇ ವರ್ಷದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಬ್ಯಾಂಕು 6190 ಸದಸ್ಯರನ್ನೊಳಗೊಂಡಿದ್ದು, ₹262 ಕೋಟಿ ಠೇವು ಹೊಂದಿದ್ದು, ₹114 ಕೋಟಿ ಸಾಲ ವಿತರಣೆ ಮಾಡಿದೆ’ ಎಂದು ಹೇಳಿದರು.

‘ಹಣಕಾಸು ವ್ಯವಹಾರದ ಜೊತೆಗೆ ಸಮಾಜಮುಖಿ ಕಾರ್ಯಗಳನ್ನೂ ಮಾಡಲಾಗುತ್ತಿದೆ. ಪ್ರತಿ ವರ್ಷ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಹಾಗೂ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತದೆ’ ಎಂದು ಹೇಳಿದರು.

ಉಪಾಧ್ಯಕ್ಷ ಧರಿಯಪ್ಪ ಯಳ್ಳಿಗುತ್ತಿ, ನಿರ್ದೇಶಕರಾದ ಮಲ್ಲನಗೌಡ ನಾಡಗೌಡರ, ಬಸಲಿಂಗಪ್ಪ ಹೊಕ್ರಾಣಿ, ಅಶೋಕ ಲಾಗಲೋಟಿ, ನಿಂಗಣ್ಣ ಗೋಡಿ, ಮುತ್ತಪ್ಪ ಕೆಂಪನ್ನವರ, ಚಂದ್ರಕಾಂತ ಕೇಸನೂರ, ಸಂಗಪ್ಪ ಕೊಪ್ಪದ, ಪ್ರಭಾವತಿ ಹೆರಕಲ್, ಕವಿತಾ ಏಳೆಮ್ಮಿ, ಪರಸಪ್ಪ ಮಾದರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬು ನಾಡಗೌಡರ, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.