ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಪುರ | ಲಕ್ಷಾನಟ್ಟಿ ಪಿಕೆಪಿಎಸ್: 12 ನಿರ್ದೇಶಕರ ಆಯ್ಕೆ

Published 29 ಜನವರಿ 2024, 14:23 IST
Last Updated 29 ಜನವರಿ 2024, 14:23 IST
ಅಕ್ಷರ ಗಾತ್ರ

ಲೋಕಾಪುರ: ಸಮೀಪದ ಲಕ್ಷಾನಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.

ಡಿಸೆಂಬರ್ 17ರಂದು ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. 12 ಸ್ಧಾನಕ್ಕೆ 24 ಜನರು ಸ್ಪರ್ಧಿಸಿದ್ದರು.

ಫಲಿತಾಂಶ ಪ್ರಕಟಿಸದಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದರಿಂದ ಮತ ಏಣಿಕೆ ನಡೆದಿರಲಿಲ್ಲ, ಈದೀಗ ನ್ಯಾಯಾಲಯ ಅನರ್ಹ ಸದಸ್ಯರ ಮತ ಸಿಂಧುಗೊಳಿಸಿ ಮತ ಏಣಿಕೆ ಮಾಡಲು ಸೂಚಿಸಿದ್ದರಿಂದ ಫಲಿತಾಂಶ ಪ್ರಕಟಿಸಲಾಯಿತು.

ಅರ್ಜುನ ಕೊಪ್ಪದ, ಭೀಮನಗೌ ಪಾಟೀಲ, ಗೋಪಾಲ ಪಾಟೀಲ, ಸುನೀಲ ನ್ಯಾಮಗೌಡ್ರ, ಅಶೋಕ ಹನಗಲಿ (ಸಾಲಗಾರ ಸಾಮಾನ್ಯ ಕ್ಷೇತ್ರ), ಬಸವಂತಪ್ಪ ಪೂಜಾರ (ಹಿಂದುಳಿದ ಅ ವರ್ಗ), ನಾಗಪ್ಪ ಕೊಪ್ಪದ (ಹಿಂದುಳಿದ ಬ ವರ್ಗ), ರುಕ್ಮವ್ವ ಪಾಟೀಲ, ರಂಗವ್ವ ಬಿ.ಪಾಟೀಲ (ಸಾಲಗಾರ ಮಹಿಳಾ ಕ್ಷೇತ್ರ), ಕಲ್ಲಪ್ಪ ಮಾದರ, (ಸಾಲಗಾರ ಪರಿಶಿಷ್ಟ ಜಾತಿ), ಗೋವಿಂದಪ್ಪ ಬಡಕಲಿ (ಸಾಲಗಾರ ಪರಿಶಿಷ್ಟ ಪಂಗಡ), ಅಪ್ಪಣಗೌಡ ಪಾಟೀಲ (ಬಿನ್ ಸಾಲಗಾರ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಬಿ.ಕಲಾದಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT