ರಬಕವಿ ಬನಹಟ್ಟಿ: ಕಳೆದ ಒಂಬತ್ತು ತಿಂಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಪರಿಷತ್ತಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಿದ್ದೇನೆ. ಪರಿಷತ್ತಿನ ಅಭಿವೃದ್ಧಿ ಮುಂದುವರಿಸಲು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ನನ್ನನ್ನು ಆಯ್ಕೆ ಮಾಡಿ ಎಂದು ಮಾಜಿ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಮನವಿ ಮಾಡಿಕೊಂಡರು.

ಅವರು ಶನಿವಾರ ಇಲ್ಲಿನ ವಕೀಲರ ಸಂಘದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಸ್ವಂತ ಕಟ್ಟಡ ನಿರ್ಮಾಣ, ವಕೀಲರ ಕಲ್ಯಾಣ ನಿಧಿ ಕಾನೂನಿಗೆ ತಿದ್ದುಪಡಿ ತಂದು ವಕೀಲರ ಕಲ್ಯಾಣ ನಿಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ, ಹೊಸ ಕಾನೂನುಗಳ ಬಗ್ಗೆ ಪ್ರತಿಯೊಂದು ವಕೀಲರ ಸಂಘದಲ್ಲಿ ವಿಚಾರ ಸಂಕಿರಣ ಆಯೋಜನೆ, ಕರ್ನಾಟಕ ರಾಜ್ಯ ವಕೀಲರ ಸಮ್ಮೇಳನವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸುವುದು ಮತ್ತು ಪರಿಷತ್ತಿನ ಪ್ರತಿಯೊಂದು ಕಾರ್ಯಗಳನ್ನು ಆನ್ ಲೈನ್ ಮೂಲಕ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಂ.ಜಿ.ಕೆರೂರ ಮತ್ತು ಈಶ್ವರಚಂದ್ರ ಭೂತಿ ಮಾತನಾಡಿದರು.

ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಕಾರ್ಯದರ್ಶಿ ರವಿಂದ್ರ ಸಂಪಗಾವಿ, ಸುರೇಶ ಗೊಳಸಂಗಿ, ಕೆ.ಜಿ.ಸಾಲ್ಗುಡೆ, ಎ.ಎಂ.ಪೆಂಡಾರಿ, ಬಸವರಾಜ ಪುಟಾಣಿ, ಸುಜಾತಾ ನಡೋಣಿ, ಎಸ್.ಎಸ್.ಸಲಬನ್ನವರ, ಭೀಮಶಿ ಯಲ್ಲಟ್ಟಿ, ಮಹಾಂತೇಶ ಪದಮಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.