ಮುಧೋಳ: ‘ಐದು ನೂರು ವರ್ಷಗಳ ನಿರಂತರ ಹೋರಾಟ, ಹಲವಾರು ಅಡೆತಡೆಗಳ ನಡುವೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಪ್ರತಿಯೊಬ್ಬ ಭಾರತೀಯನು ರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು’ ಎಂದು ಉಡುಪಿಯ ಪೇಜಾವರ (ಅಧೋಕ್ಷಜ) ಮಠಾಧೀಶ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ನಗರದಲ ಶ್ರೀರಾಘವೇಂದ್ರ ಸಭಾ ಭವನದಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಮ ಮಂದಿರ ಉಳಿಯಬೇಕಾದರೆ ಹಿಂದುಗಳು ಹಿಂದುಗಳಾಗಿ ಉಳಿದಾಗ ಮಾತ್ರ ಸಾಧ್ಯ. ಮನೆ ಮಕ್ಕಳು ದಾರಿ ತಪ್ಪದಂತೆ ನಿಗಾ ವಹಿಸಿ. ರಾಮ ರಾಜ್ಯವಾಗಬೇಕಾದರೆ ಸ್ವಾರ್ಥವನ್ನು ಬಿಟ್ಟು ತ್ಯಾಗ ಮನೋಭಾವ ಬೆಳಿಸಿಕೊಳ್ಳಿ’ ಎಂದರು.

ಅಖಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ ಮಾತನಾಡಿ, ಪೇಜಾವರ ಶ್ರೀಗಳು ಮಾಡಿರುವ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ವಿವರಿಸಿದರು.

ಗೋದಾವರಿ ಬಾಯೋರಿಫಾಯನರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ವಿದ್ವಾನ ಯಜ್ಞವಲಕ್, ಅಶೋಕ ಕುಲಕರ್ಣಿ ಮಾತನಾಡಿದರು.

ವೇದಿಕೆ ಮೇಲೆ ಸ್ವಾಗತ ಸಮಿತಿ ಅಧ್ಯಕ್ಷ ಸೋನಪ್ಪಿ ಕುಲಕರ್ಣಿ, ಬ್ರಾಹ್ಮಣ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸದ್ಧರ್ಮ ಮಂಡಳದ ಅಧ್ಯಕ್ಷ ಪ್ರಲ್ಹಾದರಾವ ದೇಶಪಾಂಡೆ, ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ, ಋಷಿಕೇಶಾಚರ್ಯ ಜೋಷಿ, ಆನಂದ ಜೇರೆ ಇದ್ದರು.

ಸಮಾರಂಭಕ್ಕೂ ಮುನ್ನ ನಗರದ ವೆಂಕಟೇಶ ದೇವಾಲಯದಿಂದ ಶ್ರೀರಾಘವೇಂದ್ರ ಮಠದ ವರೆಗೆ ನಡೆದ ಶೋಭಾಯಾತ್ರೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು.

ವೆಂಕಟೇಶ ನ್ಯಾಮಣ್ಣವರ, ಸಂಜೀವ ಮೊಕಾಸಿ ವೇದಘೋಷ ಮಾಡಿದರು. ಶ್ರದ್ಧಾ ಕಾಖಂಡಕಿ ಪ್ರಾರ್ಥಿಸಿದರು. ಸೋನಪ್ಪಿ ಕುಲಕರ್ಣಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.