ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜ.21 ರಂದು ಮಹಾಲಿಂಗಪುರ ಬಂದ್ ಹಮ್ಮಿಕೊಳ್ಳಲು ತಾಲ್ಲೂಕು ಹೋರಾಟ ಸಮಿತಿ ನಿರ್ಧರಿಸಿದೆ.

ಪಟ್ಟಣದ ಜಿಎಲ್ಬಿಸಿಯಲ್ಲಿ ಭಾನುವಾರ ಹಮ್ಮಿಕೊಂಡ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ಕಳೆದ 1373 ದಿನದಿಂದ ಅನಿರ್ದಿಷ್ಟ ಧರಣಿ ಕೈಗೊಂಡಿದ್ದರೂ ಸರ್ಕಾರ ತಾಲ್ಲೂಕು ರಚನೆಗೆ ಮುಂದಾಗುತ್ತಿಲ್ಲ. ವಿವಿಧ ರೀತಿಯ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದರು.

‘ಈ ಹಿಂದೆ ಮಹಾಲಿಂಗಪುರ ಬಂದ್ ಮಾಡಿದಾಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವ ಭರವಸೆಯನ್ನು ಪೊಲೀಸ್ ವರಿಷ್ಠಾಧಿಕಾರಿನೀಡಿದ್ದರು. ಆದರೆ, ಆ ಭರವಸೆ ಹುಸಿಯಾಗಿದೆ. ಮಧ್ಯಸ್ಥಿಕೆ ವಹಿಸಿದ್ದ ಆಡಳಿತ ವರ್ಗ ವಿಫಲಗೊಂಡಿದೆ. ಹೀಗಾಗಿ, ಮತ್ತೊಮ್ಮೆ ಮಹಾಲಿಂಗಪುರ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು’ ಎಂದು ಹೇಳಿದರು.

ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಧರೆಪ್ಪ ಸಾಂಗಲಿಕರ, ದುಂಡಪ್ಪ ಜಾಧವ, ಗಂಗಾಧರ ಮೇಟಿ, ಮಹಾಲಿಂಗಪ್ಪ ಸನದಿ, ಪರಪ್ಪ ಬ್ಯಾಕೋಡ, ಬಸವರಾಜ ನಾಗನೂರ, ಮಾನಿಂಗಪ್ಪ ಬಾಡಗಿ, ಅರ್ಜುನ ಹಲಗಿಗೌಡರ, ನಿಂಗಪ್ಪ ಬಾಳಿಕಾಯಿ, ಮಹಾದೇವ ಮಾರಾಪುರ, ಶಿವಲಿಂಗ ಟಿರಕಿ, ರಫೀಕ ಮಾಲದಾರ, ಸಿದ್ದಪ್ಪ ಶಿರೋಳ, ಹಣಮಂತ ಜಮಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.