ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗಪುರ: ನಾಗರಾಳ ಗ್ರಾಮ ಪಂಚಾಯ್ತಿಗೆ ‘ಗಾಂಧಿ ಗ್ರಾಮ ಪುರಸ್ಕಾರ’

Published 4 ಅಕ್ಟೋಬರ್ 2023, 7:02 IST
Last Updated 4 ಅಕ್ಟೋಬರ್ 2023, 7:02 IST
ಅಕ್ಷರ ಗಾತ್ರ

–ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಮೂಲಸೌಕರ್ಯಗಳ ಅಭಿವೃದ್ಧಿ, ಆಡಳಿತದಲ್ಲಿ ಸುಧಾರಣೆ ಹಾಗೂ ಸ್ವಚ್ಛತೆ ಸಾಧನೆಗಾಗಿ ಸಮೀಪದ ನಾಗರಾಳ ಗ್ರಾಮ ಪಂಚಾಯ್ತಿಗೆ 2022-23 ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಭಾಜನವಾಗಿದೆ.

ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಗರಾಳ ಹಾಗೂ ಅಕ್ಕಿಮರಡಿ ಗ್ರಾಮಗಳಿದ್ದು, ಒಟ್ಟು 1,136 ಕುಟುಂಬಗಳಿವೆ. ಅಧ್ಯಕ್ಷೆ ಪಾರ್ವತಿ ತೇಲಿ, ಉಪಾಧ್ಯಕ್ಷೆ ಲಕ್ಷ್ಮವ್ವ ಹರಿಜನ ಹಾಗೂ ಪಿಡಿಒ ರಂಜಿತಾ ಹತ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರೇ ಆಡಳಿತ ಚುಕ್ಕಾಣಿ ಹಿಡಿದಿರುವುದು ವಿಶೇಷ.

ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಡಿಜಿಟಲ್ ಗ್ರಂಥಾಲಯ.
ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಡಿಜಿಟಲ್ ಗ್ರಂಥಾಲಯ.

ಗ್ರಾಮಸಭೆ, ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು, ಅಭಿವೃದ್ಧಿ ಕಾಮಗಾರಿಗಳ ಪಾರದರ್ಶಕತೆ, ನರೇಗಾ ಯೋಜನೆಯ ಉತ್ತಮ ಪ್ರಗತಿ, ಕಂದಾಯ ವಸೂಲಿ, ವಸತಿ ಯೋಜನೆಗಳಲ್ಲಿ ಗ್ರಾಮ ಪಂಚಾಯ್ತಿ ಉತ್ತಮ ಸಾಧನೆ ಮಾಡಿದೆ.

ಮಾದರಿ ಡಿಜಿಟಲ್ ಗ್ರಂಥಾಲಯ: ಇಲ್ಲಿ ಡಿಜಿಟಲ್ ಗ್ರಂಥಾಲಯ ಮಾದರಿಯಾಗಿದ್ದು, ಸುಸಜ್ಜಿತ ಕಟ್ಟಡ ಹೊಂದಿದೆ. ಪುಸ್ತಕಗಳು, ಪತ್ರಿಕೆಗಳು, ಕಂಪ್ಯೂಟರ್, ಟ್ಯಾಬ್, ಅಂಗವಿಕಲರ ಕಿಟ್, ಚೆಸ್, ಕೇರಂ ಬೋರ್ಡ್, ಶುದ್ಧ ಕುಡಿಯುವ ನೀರು, ಹೈಟೆಕ್ ಶೌಚಾಲಯ, ಪೀಠೋಪಕರಣ ಸೇರಿದಂತೆ ವಿವಿಧ ಸೌಕರ್ಯಗಳನ್ನು ಹೊಂದಿದೆ.

ಅಂಗನವಾಡಿ: ಎಸ್‌ಸಿ ಕಾಲೊನಿಯಲ್ಲಿ ಅಂಗನವಾಡಿ ನಿರ್ಮಿಸಲಾಗಿದ್ದು, ಪಂಚಾಯ್ತಿಯ 15ನೇ ಹಣಕಾಸು ಯೋಜನೆಯಡಿ ಹೊರಗೋಡೆ ಮೇಲೆ ಬಣ್ಣ ಹಾಗೂ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಪೀಠೋಪಕರಣ ಅಳವಡಿಸಲಾಗಿದೆ.

ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ರನ್ನಿಂಗ್ ಟ್ರಾö್ಯಕ್.
ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ರನ್ನಿಂಗ್ ಟ್ರಾö್ಯಕ್.

ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾದಡಿ ಅಂದಾಜು ₹20 ಲಕ್ಷ ವೆಚ್ಚದಲ್ಲಿ ರನ್ನಿಂಗ್ ಟ್ರ್ಯಾಕ್, ಆಟದ ಮೈದಾನ ನಿರ್ಮಿಸಲಾಗಿದೆ. ಹಸಿರಿನಿಂದ ಕಂಗೊಳಿಸುವ ಉದ್ಯಾನ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿದೆ.

ನಾಗರಾಳ ಹಾಗೂ ಅಕ್ಕಿಮರಡಿ ಎರಡೂ ಗ್ರಾಮಗಳಲ್ಲಿ ಐದು ಸಾಮೂಹಿಕ ಶೌಚಾಲಯ, ಶೇ 75ರಷ್ಟು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅಕ್ಕಿಮರಡಿಯಲ್ಲಿ ಕುಸ್ತಿ ಮೈದಾನ, ಸಾರ್ವಜನಿಕ ಆಟದ ಮೈದಾನವಿದೆ. ಎರಡು ಶುದ್ಧ ಕುಡಿಯುವ ನೀರಿನ ಘಟಕ, ಸಂಜೀವಿನಿ ಶೆಡ್ ಇದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ.

ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರ.
ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರ.
ಗ್ರಾಮ ಪಂಚಾಯ್ತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮೇಲಧಿಕಾರಿಗಳು ಸಿಬ್ಬಂದಿ ಹಾಗೂ ಗ್ರಾಮಸ್ಥರ ಪರಿಶ್ರಮದ ಫಲವಾಗಿ ಈ ಪುರಸ್ಕಾರ ದೊರೆತಿದೆ.
–ರಂಜಿತಾ ಹತ್ತಿ ಪಿಡಿಒ ನಾಗರಾಳ ಗ್ರಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT