ಜಮಖಂಡಿ: ‘ಕಂದಾಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ತೋದಲಬಾಗಿ ಗ್ರಾಮದಲ್ಲಿ 10 ಎಕರೆ ಜಾಗ ನೀಡಲು ಸರ್ಕಾರದಿಂದ ಅನುಮೊದನೆ ಸಿಕ್ಕಿದೆ. ಆ ಜಾಗವನ್ನು ತೋಟಗಾರಿಕೆ ಇಲಾಖೆಯವರು ಸದ್ಬಳಕೆ ಮಾಡಿಕೊಂಡು ರೈತರಿಗೆ ಅನುಕೂಲವಾಗುವಂತೆ ಕ್ರಿಯಾ ಯೋಜನೆ ತಯಾರಿಸಬೇಕು’ ಎಂದು ಶಾಸಕ ಜಗದೀಶ ಗುಡಗುಂಟಿ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘10 ಎಕರೆ ಜಾಗದಲ್ಲಿ ತೆಂಗು, ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು ಸೇರಿದಂತೆ ನರ್ಸರಿ ಮಾಡಿ ರೈತರಿಗೆ ನೀಡಬೇಕು. ನಮ್ಮ ತಾಲ್ಲೂಕಿನಲ್ಲಿ ರೈತರು ಬೇರೆ ಬೇರೆ ಹಣ್ಣು, ಹೂ, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಬೇರೆ ಕಡೆಗೆ ರಪ್ತು ಮಾಡುವಂತೆ ಲಾಭದಾಯಕ ಹಾಗೂ ಅದರ ಮಾರುಕಟ್ಟೆಗಳನ್ನು ರೈತರಿಗೆ ತಿಳಿಸಬೇಕು’ ಎಂದರು.

ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಪ್ರವೀಣ ಗಾಣಿಗೆರ ಮಾತನಾಡಿ, ‘ಕಳೆದ ತಿಂಗಳ ಅಕಾಲಿಕ ಮಳೆಯಿಂದ ಸಾವಳಗಿ ಭಾಗದಲ್ಲಿ ಒಣದ್ರಾಕ್ಷಿ ಮಾಡಲು ಹಾಕಿರುವ 20 ಹೆಕ್ಟೇರ್ ನಷ್ಟವಾಗಿದೆ, ಆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಆದರೆ ಎನ್ಡಿಆರ್ಎಫ್ ನಿಯಮದ ಪ್ರಕಾರ ಸರ್ಕಾರದಿಂದ ಅನುದಾನ ನೀಡಲು ಬರುವುದಿಲ್ಲ, ರೈತರು ಮಾಡಿರುವ ವಿಮೆ ಮೂಲಕ ಹಣ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾದ ಗ್ರಾಮಗಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ, ರಸ್ತೆ, ಶಾಲೆ, ಅಂಗನವಾಡಿ ಸೇರಿದಂತೆ ಸರ್ಕಾರದ ವಿವಿಧ ಕಟ್ಟಡಗಳು ದುಃಸ್ಥಿತಿಯಲ್ಲಿವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದರೂ ಅನುದಾನ ಸಿಗುತ್ತಿಲ್ಲ, ಶಾಸಕರ ಅನುದಾನದಲ್ಲಿ ಹಲವು ಕಡೆ ಹಣ ನೀಡಿ ತಾತ್ಕಾಲಿಕ ದುರಸ್ತಿ ಮಾಡುತ್ತಿದ್ದೇನೆ’ ಎಂದು ಶಾಸಕರು ಪುನರ್ವಸತಿ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದರು.

ಪುನರ್ವಸತಿ ಕೇಂದ್ರಕ್ಕೆ ಜನರು ಬರದಿರಲು ಕಾರಣ ಹುಡುಕಿ ವರದಿ ಸಲ್ಲಿಸಿ, ಪುನರ್ವಸತಿ ಕೇಂದ್ರದಲ್ಲಿ ಶಾಲೆ, ಆಸ್ಪತ್ರೆ, ಸಮುದಾಯಭವನ, ಅಂಗನವಾಡಿ ಕಟ್ಟಡಗಳನ್ನು ಬಳಸದಿದ್ದರಿಂದ ಹಾಳಾಗುತ್ತಿವೆ, ಸರ್ಕಾರದ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕರ ಆಪ್ತಸಹಾಯಕರಿಂದ ಅಧಿಕಾರಿಗಳಿಗೆ ಪ್ರಶ್ನೆ! ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ನಾಲ್ಕು ಜನ ಆಪ್ತಸಹಾಯಕರಾದ ತಾಲ್ಲೂಕು ಪಂಚಾಯಿತಿ ನಿವೃತ್ತ ನೌಕರ ಎಂ.ಎನ್.ಬಾಗಾದಿ ಲೋಕೋಪಯೋಗಿ ಇಲಾಖೆಯ ನಿವೃತ್ತ ನೌಕರ ಪಾಂಡುರಂಗ ಗಾಯಕವಾಡ ನರೇಂದ್ರ ಮಾನೆ ನವೀನ ಚನಾಳ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದರು. ಶಾಸಕರ ಆಪ್ತಸಹಾಯಕರು ಅಧಿಕಾರಿಗಳಿಗೆ ಪ್ರಶ್ನೆ ಮಾಡುವಂತಿಲ್ಲ ಶಾಸಕರು ಯಾವುದಾದರು ವಿಷಯವನ್ನು ಮರೆತಿದ್ದರೆ ಚೀಟಿ ಮೂಲಕ ತಿಳಿಸಬಹುದು ಹಾಗೂ ಶಾಸಕರು ಹೇಳಿದ ವಿಷಯವನ್ನು ಬರೆದುಕೊಳ್ಳಬಹುದು.ನೇರವಾಗಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಲು ಅವಕಾಶವಿಲ್ಲ ಹಾಗೂ ಶಾಸಕರ ಖಾಸಗಿ ಆಪ್ತ ಸಹಾಯಕರಿಗೆ ಈ ಸಭೆಯಲ್ಲಿ ಅವಕಾಶವಿಲ್ಲ ಸರ್ಕಾರಿ ಆಪ್ತ ಸಹಾಯಕರಿಗೆ ಸಭೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.