ಜಮಖಂಡಿ: ತಾಲ್ಲೂಕಿನ ಆಲಗೂರ ಗ್ರಾಮದ ಅರ್ಜುನ ನಾಟಿಕಾರ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಭಾನುವಾರ ಸಂಜೆ ಗ್ರಾಮದಲ್ಲಿರುವ ಟವರ್ ಏರಿ ಹುಚ್ಚಾಟ ಮೆರದಿದ್ದಾನೆ. ಟವರ್ ತುದಿಯಲ್ಲಿ ನಿಂತು ಪೋನ್ ಹಿಡಿದು ಪೋಸ್ ಕೊಡುವದು ಕೈ ಮುಗಿಯುವದು ಕೆಳಗೆ ಇದ್ದವರಿಗೆ ಪೋನ್ ಮಾಡುವದನ್ನು ಮಾಡಿದ್ದಾನೆ ಗ್ರಾಮಸ್ಥರು ಪೋನ್ ನಲ್ಲಿ ಮಾತನಾಡುತ್ತಾ ಕೆಳಗೆ ಇಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.