ಬಾಗಲಕೋಟೆ: ಭಾರತೀಯರು ಪಾಕಿಸ್ತಾನಿ ಮಹಿಳೆಯರ ಜೊತೆ ವಿವಾಹ ಸಂಬಂಧ ಬೆಳೆಸುತ್ತಿರುವ ವಿಷಯಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ಭಾರತೀಯರಿಗೆ ನಮ್ಮಲ್ಲಿ ಗಂಡು-ಹೆಣ್ಣು ಸಿಗುವುದಿಲ್ಲವೇ? ಅಲ್ಲಿಯವರನ್ನೇಕೆ ವಿವಾಹ ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತೀಯರ ಜೊತೆ ಪಾಕಿಸ್ತಾನಿಯರು ಸಂಬಂಧ ಬೆಳೆಸುವುದರ ಉದ್ದೇಶವೇ ಬೇರೆ ಅಗಿರುತ್ತದೆ. ಭಾರತಕ್ಕೆ ಏನಾದರೂ ಧಕ್ಕೆ ಮಾಡಬೇಕು ಎಂಬುದೇ ಅವರ ಮೂಲ ಉದ್ದೇಶವಾಗಿರುತ್ತದೆ. ಅಲ್ಲಿಯ ಸಂಬಂಧ ಬೆಳೆಸುವ ಅವಶ್ಯಕತೆ ಏನಿದೆ? ಅವರು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವಾಗ ನಾವು ಅವರ ಜೊತೆ ಸಂಬಂಧ ಬೆಳೆಸುವುದು ಸರ್ವಥಾ ಸರಿಯಲ್ಲ’ ಎಂದು ಹೇಳಿದರು.

ಸಿಆರ್ಪಿಎಫ್ ಯೋಧ ಒಬ್ಬರು ಪಾಕಿಸ್ತಾನಿ ಪ್ರಜೆಯನ್ನು ವಿವಾಹವಾಗಿರುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ‘ಇದೊಂದು ಪ್ರಕರಣ ಈಗ ಪತ್ತೆಯಾಗಿದೆ. ಇಂತಹ ಇನ್ನೆಷ್ಟೋ ಪ್ರಕರಣಗಳು ಇರಬಹುದು. ನಮ್ಮ ಗುಪ್ತಚರ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಇದೆಲ್ಲ ಗೊತ್ತಿದ್ದರೂ ಅವರು ಸುಮ್ಮನಿರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.