ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ: ಮಕ್ಕಳನ್ನು ಹೈರಾಣಾಗಿಸಿದ ಮಂಗನ ಬಾವು

ಕೆ.ಎಸ್. ಸೋಮನಟ್ಟಿ
Published 8 ಮಾರ್ಚ್ 2024, 6:06 IST
Last Updated 8 ಮಾರ್ಚ್ 2024, 6:06 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹರಡಿರುವ ‘ಮಂಗನ ಬಾವು’ ಕಾಯಿಲೆ ಮಕ್ಕಳನ್ನು ಹೈರಾಣಾಗಿಸಿದೆ. ಸಹಜವಾಗಿಯೇ ಇದು ಪಾಲಕರನ್ನು ಚಿಂತೆಗೆ ತಳ್ಳಿದೆ. ವಿವಿಧ ಶಾಲೆಗಳಲ್ಲಿ ಓದುತ್ತಿರುವ ಹಾಗೂ ಮನೆಯಲ್ಲಿರುವ ಮಕ್ಕಳಿಗೂ ಈ ಕಾಯಿಲೆ ಬಾಧಿಸುತ್ತಿದೆ.

ಶೈಕ್ಷಣಿಕ ವರ್ಷವಿಡೀ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು, ಈಗ ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಈ ಮಧ್ಯೆ ಕಾಡುತ್ತಿರುವ ಮಂಗನ ಬಾವು ಕಾಯಿಲೆಯಿಂದ ರೋಸಿ ಹೋಗಿದ್ದಾರೆ.

ತಾಲ್ಲೂಕು ಆಸ್ಪತ್ರೆಯ ಜತೆಗೆ, ಆಯಾ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮಕ್ಕಳು ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬರುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಈ ಕಾಯಿಲೆ ಹಲವರನ್ನು ಬಾಧಿಸುತ್ತಿತ್ತು. ಆದರೆ ಈ ಬಾರಿ ಬೇಸಿಗೆ ಆರಂಭಗೊಂಡರೂ ಅಲ್ಲಲ್ಲಿ ಪ್ರಕರಣ ಕಂಡುಬರುತ್ತಲೇ ಇವೆ. ‌‌‌‌‌‌‌‌‌ ಇದು ಸಾಂಕ್ರಾಮಿಕ ಕಾಯಿಲೆ. ವಯಸ್ಕರಿಗೆ ಬಾಧಿಸುವುದು ಕಡಿಮೆ. ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾಯಿಲೆಗೀಡಾದವರು ತಕ್ಷಣ  ವಿಶ್ರಾಂತಿ ಪಡೆಯಬೇಕು. ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಪ್ರತ್ಯೇಕವಾದ ಚಿಕಿತ್ಸೆ ಇಲ್ಲ. ಜ್ವರ, ಗಂಟಲು ನೋವಿಗೆ ನೀಡಲಾಗುವ ಸಾಮಾನ್ಯ ಚಿಕಿತ್ಸೆಯನ್ನು ಇದಕ್ಕೂ ನೀಡಲಾಗುತ್ತದೆ.

Quote - ಮಂಗನಬಾವು ಕಾಯಿಲೆ ಅಪಾಯಕಾರಿಯಲ್ಲ. ಆದರೆ ಕಾಯಿಲೆಯ ಲಕ್ಷಣ ಕಂಡುಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಡಾ. ವಿಶ್ವನಾಥ ಪತ್ತಾರ ಚಿಕ್ಕ ಮಕ್ಕಳ ತಜ್ಞರು ತಾಲ್ಲೂಕು ಆಸ್ಪತ್ರೆ ಬೀಳಗಿ

Cut-off box - ಮಂಗನ ಬಾವು ಲಕ್ಷಣಗಳು ಕಿವಿಯ ಕೆಳಭಾಗ ಮತ್ತು ಅರ್ಧದಷ್ಟು ಕೆನ್ನೆ ಊದಿಕೊಳ್ಳುತ್ತದೆ.  ಜ್ವರ ತಲೆನೋವು ಮೈಕೈ ನೋವು ಹಸಿವಾಗದಿರುವುದು ಅಪಾಯಕಾರಿ ಅಲ್ಲ ಮಂಗನಬಾವು ಅಪಾಯಕಾರಿ ಅಲ್ಲ. ಆದರು ಜಾಗೃತಿ ವಹಿಸಿ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ. ಹಾಗಾಗಿ ಮಕ್ಕಳು ಹೆದರದಂತೆ ತಿಳಿಹೇಳಿದ್ದೇವೆ. ಕಾಯಿಲೆಯಿಂದ ಗುಣಮುಖರಾಗುವವರೆಗೆ ಮಕ್ಕಳು ಮನೆಯಲ್ಲಿ ಇರುವಂತೆ ನೋಡಿಕೊಳ್ಳಲು ಪಾಲಕರಿಗೆ ಸೂಚನೆ ನೀಡಿದ್ದೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ಘಟಕದ ಅಧ್ಯಕ್ಷ ಸುರೇಶ ಮನಗೂಳಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT