ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಧೋಳ ಬಂದ್: ಸಂತ್ರಸ್ತರು, ರೈತರ ತೀರ್ಮಾನ

Published 11 ಆಗಸ್ಟ್ 2024, 16:06 IST
Last Updated 11 ಆಗಸ್ಟ್ 2024, 16:06 IST
ಅಕ್ಷರ ಗಾತ್ರ

ಮುಧೋಳ: ಘಟಪ್ರಭಾ ನದಿಯ ಪ್ರವಾಹದಲ್ಲಿ‌ ಮುಳುಗಡೆಯಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂಬ ಕೂಗು ಜೋರಾಗತೊಡಗಿದ್ದು, ಸರ್ಕಾರ ಹೋರಾಟಗಾರರ ಕೂಗಿಗೆ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಮುಧೋಳ ಬಂದ್ ಮಾಡಿ‌ ಉಗ್ರ ಹೋರಾಟ ನಡೆಸುವುದಾಗಿ ಪ್ರವಾಹಕ್ಕೊಳಗಾದ 30 ಗ್ರಾಮಗಳ ಸಂತ್ರಸ್ತರು, ರೈತರು ಒಮ್ಮತದ‌ ನಿರ್ಧಾರ ಕೈಗೊಂಡಿದ್ದಾರೆ.

ನಗರದ ಜಿಎಲ್ಬಿಸಿ ಪ್ರವಾಸಿ‌ ಮಂದಿರದಲ್ಲಿ ಪ್ರವಾಹ ಸಂತ್ರಸ್ತರು ಹಾಗೂ ರೈತರ ಸಭೆಯಲ್ಲಿ‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಹಾರಕ್ಕಾಗಿ‌ ಒತ್ತಾಯಿಸಿ ಆ.7ರಂದು ಸುರಿವ ಮಳೆಯಲ್ಲಿಯೇ ನೆನೆದು ಹೋರಾಟ ಮಾಡಿದರೂ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ನಮ್ಮ ಹೋರಟಾಕ್ಕೆ‌ ಸ್ಪಂದಿಸುವ ಕಾರ್ಯ ಮಾಡಿಲ್ಲ. ಅದಾದ ಬಳಿಕ ಆ.10ರವರೆಗೆ ನಾವು ಸರ್ಕಾರಕ್ಕೆ ಗಡವು ನೀಡಿದ್ದೆವು. ಆದರೆ ಸರ್ಕಾರ ನಮ್ಮ ಸಮಸ್ಯೆಗೆ ಧ್ವನಿಯಾಗುತ್ತಿಲ್ಲ. ಅದಕ್ಕಾಗಿ ಉಗ್ರ ಹೋರಾಟ ಅನಿವಾರ್ಯವಾಗಿದೆ ಎಂದು ನೊಂದ ರೈತರು ಹೇಳಿದರು.

ಮುಖಂಡರಾದ ದುಂಡಪ್ಪ‌ ಯರಗಟ್ಟಿ, ಬಸವಂತ ಕಾಂಬಳೆ, ಮುತ್ತಪ್ಪ ಕೊಮಾರ, ಸುಭಾಸ ಶಿರಬೂರ, ಬಂಡು ಘಾಟಗೆ, ಸದಪ್ಪ ತೇಲಿ, ಮಹೇಶಗೌಡ ಪಾಟೀಲ, ಸುಗರಪ್ಪ ಅಕ್ಕಿಮರಡಿ, ತಿಮ್ಮಣ್ಣ ಬಟಕುರ್ಕಿ, ಸದಾಶಿವ ಇಟಗನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT