ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾ ಗಿಜಿಗುಡುವ ಬಸ್ ನಿಲ್ದಾಣ ಪ್ರದೇಶ: ಬೈಕ್ ನಿಲುಗಡೆಗಿಲ್ಲ ಸೂಕ್ತ ವ್ಯವಸ್ಥೆ

ಮಹೇಶ ಬೋಳಿಶೆಟ್ಟಿ
Published 26 ಡಿಸೆಂಬರ್ 2023, 14:20 IST
Last Updated 26 ಡಿಸೆಂಬರ್ 2023, 14:20 IST
ಅಕ್ಷರ ಗಾತ್ರ

ಲೋಕಾಪುರ: ಸದಾ ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದ ಸಮೀಪ ಬೈಕ್‌ಗಳ ಸಂಚಾರ ಹೆಚ್ಚಾಗಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಎದುರಾಗಿದೆ. ಬೆಳಗಾವಿ, ರಾಯಚೂರು ಮತ್ತು ವಿಜಯಪುರದಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ಮಾರ್ಗದಲ್ಲಿ ಬೃಹತ್‌ ವಾಹನಗಳು ಸಂಚರಿಸುತ್ತವೆ.

ಎಲ್ಲಿ ಬೇಕೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆ ಬದಿ ವ್ಯಾಪಾರ ಮಾಡುವ ತಳ್ಳು ಗಾಡಿಗಳು ರಸ್ತೆಯಲ್ಲಿ ನಿಲ್ಲುತ್ತವೆ. ಮಂಗಳವಾರ ವಾರದ ಸಂತೆಯಾಗಿರುವುದರಿಂದ ಬೈಕ್‌ಗಳ ಭರಾಟೆ ಹೆಚ್ಚುತ್ತದೆ. ಮುಧೋಳ ರಸ್ತೆಯ ಶಿವಾಜಿ ವೃತ್ತದಿಂದ ಬಾಗಲಕೋಟೆ ರಸ್ತೆಯ ಎಪಿಎಂಸಿ ವರೆಗೆ ಮತ್ತು ಬೆಳಗಾವಿ ರಸ್ತೆಯ ರಾಮಲಿಂಗೇಶ್ವರ ದೇಗುಲದ ವರೆಗೆ ದಟ್ಟಣೆ ಅಧಿಕವಾಗಿ ರಸ್ತೆಯ ಮೇಲೆ ನಿಲ್ಲುತ್ತವೆ.

‘ಬಸವೇಶ್ವರ ವೃತ್ತದಲ್ಲಿರುವ ನಾಡಕಚೇರಿಗೆ ಮುಂದೆ ಮೋಟರ್ ಸೈಕಲ್‌ಗಳು ಮತ್ತು ಟಂಟಂಗಳು ನಿಂತು, ಕಚೇರಿಗೆ ಬರುವವರಿಗೆ ತೊಂದರೆ ಎದುರಾಗಿದೆ. ಮೋಟರ್ ಸೈಕಲ್ ಸವಾರರು ಸಂಚಾರ ನಿಯಮ ಮರೆತು, ಎತ್ತ ಬೇಕೆಂದರಲ್ಲಿ ಹೋಗುತ್ತಾರೆ. ಪೊಲೀಸರು ಕ್ರಮ ಕೈಗೊಳ್ಳದೇ ಕುಳಿತಿದ್ದಾರೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮತ್ತು ಪೊಲೀಸರು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ದೆ ಕಲ್ಪಿಸಬೇಕು’ ಎನ್ನುತಾರೆ ಸ್ಧಳೀಯ ನಿವಾಸಿಗಳು.

‘ಪಾರ್ಕಿಂಗ್ ವ್ಯವಸ್ಧೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಪ್ರತಿಕ್ರಿಯಿಸಿದರು.

ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾರೆ. ಆದರೂ ಪಾರ್ಕಿಂಗ್ ಸಮಸ್ಯೆ ನಿವಾರಿಸಲಾಗುವುದು
ಜಗದೇಶ ಸಗರಿ ಪಿಎಸ್ಐ ಅಪರಾಧ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT