ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ರಕ್ಷಣೆ, ಪ್ರಗತಿಗೆ ಸಹಕರಿಸಿ

ಪಂಚಪ್ರಾಣ ಪ್ರತಿಜ್ಞೆ: ನಗರಸಭೆಯ ಪೌರಾಯುಕ್ತ ಜಗದೀಶ ಈಟಿ ಹೇಳಿಕೆ
Published 17 ಆಗಸ್ಟ್ 2023, 14:43 IST
Last Updated 17 ಆಗಸ್ಟ್ 2023, 14:43 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ‘ಭಾರತದ ರಕ್ಷಣೆ ಮತ್ತು ಪ್ರಗತಿಗೆ ನಮ್ಮನ್ನು ಸಮರ್ಪಿಸಿಕೊಳ‍್ಳಬೇಕು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ನಗರಸಭೆಯ ಪೌರಾಯುಕ್ತ ಜಗದೀಶ ಈಟಿ ತಿಳಿಸಿದರು.

ಇಲ್ಲಿನ ಗಾಂಧಿ ವೃತ್ತದ ಬಳಿ ಗುರುವಾರ ನೆರೆದಿದ್ದವರಿಗೆ ಪಂಚಪ್ರಾಣ ಪ್ರತಿಜ್ಞೆ ಬೋಧಿಸಿ ಅವರು ಮಾತನಾಡಿದರು.

‘ಪಂಚಪ್ರಾಣ ಪ್ರತಿಜ್ಞೆ ದೇಶದ ಬಗ್ಗೆ ನಮ್ಮ ಬದ್ಧತೆಯನ್ನು ಪುನರುಚ್ಛರಿಸುವುದಾಗಿದೆ. ಪ್ರತಿಯೊಬ್ಬರೂ ಭಾರತ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಬೇಕು. ದೇಶದ ಶ್ರೀಮಂತ ಪರಂಪರೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ, ಏಕತೆ ಮತ್ತು ಅಖಂಡತೆಗಾಗಿ ಶ‍್ರಮಿಸಬೇಕು. ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಬೇಕು’ ಎಂದು ತಿಳಿಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ನಾಮಫಲಕವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಪ್ರಭಾಕರ ಮುಳೆದ, ಚಿದಾನಂದ ಹೊರಟ್ಟಿ, ಶಿವಾನಂದ ಬುದ್ನಿ, ಗೌರಿ ಮಿಳ್ಳಿ, ರವಿ ಕೊರ್ತಿ, ರಾಘವೇಂದ್ರ ಕುಲಕರ್ಣಿ, ಸುರೇಶ ಬಾಗೇವಾಡಿ, ಶೋಭಾ ಹೊಸಮನಿ, ರಾಜಕುಮಾರ ಹೊಸೂರ, ಸುರೇಶ ಪರಕಾಳೆ, ವಸಂತ ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT