ಮಂಗಳವಾರ, ಜನವರಿ 28, 2020
17 °C

ತೇರಿನ ಚಕ್ರಕ್ಕೆ ಸಿಲುಕಿ ಒಬ್ಬನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತಾಲ್ಲೂಕಿನ ಲವಳೇಶ್ವರ ತಾಂಡಾದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಮಂಗಳವಾರ ಸಂಜೆ ರಥೋತ್ಸವದ ವೇಳೆ ತೇರಿನದ ಚಕ್ರ ತಲೆಗೆ ಬಡಿದು ಭಕ್ತರೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬರ ಕಾಲು ಕತ್ತರಿಸಿವೆ.

ಸಮೀಪದ ಜಡ್ರಾಮಕುಂಟಿ ಗ್ರಾಮದ ಬಸಪ್ಪ ಬಿಂಗಿ (28) ಸಾವಿಗೀಡಾದವರು. ಅದೇ ಗ್ರಾಮದ ಶರಣಪ್ಪ ಕುಂಬಾರ ಕಾಲು ಕಳೆದುಕೊಂಡವರು.

ತೇರು ಹರಿಯುವಾಗ ಚಕ್ರದ ಬಳಿಯೇ ಇದ್ದ ಇಬ್ಬರೂ ನೂಕು–ನುಗ್ಗಲಿನಲ್ಲಿ ಆಯತಪ್ಪಿ ಚಕ್ರಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)