ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠವು ಈಗ ಮತ್ತೆ ಸುದ್ದಿಯಲ್ಲಿದೆ. 2ಎ ಮೀಸಲಾತಿ ಹೋರಾಟದ ಕಾರಣಕ್ಕೆ ಈ ಪೀಠ ಹಾಗೂ ಅದರ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಯಲ್ಲಿದ್ದರು. ಈಗ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರ ನಡುವಿನ ವೈಮನಸ್ಸಿನ ಕಾರಣಕ್ಕೆ ಉಂಟಾಗಿರುವ ವಿವಾದ ಸದ್ದು ಮಾಡುತ್ತಿದೆ. ಸ್ವಾಮೀಜಿಯವರ ಉಚ್ಚಾಟನೆ, ಮತ್ತೊಂದು ಪೀಠ ಸ್ಥಾಪನೆ... ಇನ್ನಿತರ ವಿಚಾರಗಳೆಲ್ಲ ಚರ್ಚೆಯಾಗುತ್ತಿವೆ
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಲಿಂಗಾಯತ ಪಂಚಮಸಾಲಿ ಪೀಠ ಕಟ್ಟಡದ ನೋಟ
ವಿಜಯಾನಂದ ಕಾಶಪ್ಪನವರ
ಸಿ.ಸಿ.ಪಾಟೀಲ
ಮುರುಗೇಶ ನಿರಾಣಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ
ವಿಜಯಾನಂದ ಕಾಶಪ್ಪನವರ ಆಗಲಿ ಅಥವಾ ಸ್ವಾಮೀಜಿ ಅವರಾಗಲಿ ಒಂದು ಹೆಜ್ಜೆ ಹಿಂದೆ ಸರಿದು ಪಂಚಮಸಾಲಿ ಸಮಾಜದ ಹಿತ ಕಾಯಬೇಕು. ಇದರಿಂದ ಇಡೀ ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗುತ್ತದೆ
ಸಿ.ಸಿ.ಪಾಟೀಲ ಶಾಸಕ
ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಾಗಿಯೇ ಪೀಠ ತೊರೆದರೆ ಸಂತೋಷ
ವಿಜಯಾನಂದ ಕಾಶಪ್ಪನವರ ಅಧ್ಯಕ್ಷ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್
ಮೀಸಲಾತಿ ಹೋರಾಟದಿಂದ ಕೆಲವರಿಗೆ ಇರುಸುಮುರುಸು ಆಗಿರಬಹುದು. ನನ್ನದು ಪ್ರಾಮಾಣಿಕ ಹೋರಾಟ. ನಂಬಿದ ಜನರಿಗೆ ದ್ರೋಹ ಮಾಡುವುದಿಲ್ಲ. ಇದು ಜನಪರ ಹೋರಾಟವೇ ವಿನಾ ಯಾವುದೇ ವ್ಯಕ್ತಿ ಪಕ್ಷ ಪರವಾದುದಲ್ಲ