ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ | ಕಳಪೆ ಆಹಾರ ಪದಾರ್ಥ ಸರಬರಾಜು: 23 ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ

Published 27 ಜೂನ್ 2024, 16:26 IST
Last Updated 27 ಜೂನ್ 2024, 16:26 IST
ಅಕ್ಷರ ಗಾತ್ರ

ಜಮಖಂಡಿ: ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪದಾರ್ಥ ಸರಬರಾಜು ಆಗಿರುವ ಕುರಿತು ವರದಿ ಆಧರಿಸಿ ಸಿಡಿಪಿಒ ಹಾಗೂ  22 ಮೇಲ್ವಿಚಾರಕರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು 24 ಗಂಟೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಜಮಖಂಡಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ವರದಿ ಜೂನ್‌ 27 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದರಲ್ಲಿ ಕಳಪೆ ಆಹಾರ ಪದಾರ್ಥ ಸರಬರಾಜು ವಿಷಯ ಪ್ರಕಟವಾಗಿತ್ತು.

ಸಿಡಿಪಿಒ ಎಂ.ಪಿ.ದಾಸರ, ಜಮಖಂಡಿ ವಲಯದ ಹಿರಿಯ ಮೇಲ್ವಿಚಾರಕಿ ಎಸ್.ಕೆ. ಹಂಚಿನಾಳ, ಎಸ್.ವಿ. ಮಹಾಜನ, ಬನಹಟ್ಟಿ ವಲಯದ ಮೇಲ್ವಿಚಾರಕಿ ಬಿ.ಜಿ. ಹಿರೇಮಠ, ವಹೀದಾಬೇಗಂ ಮಂಟೂರ, ರಬಕವಿ ವಲಯದ ಹಿರಿಯ ಮೇಲ್ವಿಚಾರಕಿ ಎಸ್.ಎಸ್.ಚೆನ್ನಿ, ಕಡಪಟ್ಟಿ ವಲಯದ ಮೇಲ್ವಿಚಾರಕಿ ಜಿ.ಎಸ್.ಅಂದಾನಿ, ಸಾವಳಗಿ ದಾನಮ್ಮ ಅಥಣಿ, ಎಲ್.ಎಸ್.ಜಂಬಗಿ, ಎಸ್.ಆರ್.ಕದಂ, ಹುನ್ನೂರ ವಲಯದ ಮೇಲ್ವಿಚಾರಕಿ ಸುಜಾತಾ ಬಿರಾದಾರ, ಹಿಪ್ಪರಗಿ ವಲಯದ ಮೇಲ್ವಿಚಾರಕಿ ಆರ್.ಎಚ್.ತಿಮ್ಮಾಪೂರ, ಗೋಠೆ ವಲಯದ ಮೇಲ್ವಿಚಾರಕಿ ಸಾವಿತ್ರಿ ಕುಂಬಾರ, ಕೊಣ್ಣೂರ ವಲಯದ ಮೇಲ್ವಿಚಾರಕಿ ಎಸ್.ಕೆ.ಫಿರೋಜ, ನಾವಲಗಿ ವಲಯದ ಮೇಲ್ವಿಚಾರಕಿ ಎಸ್.ಎಂ.ಅಂಬಿ, ಚಿಮ್ಮಡ ವಲಯದ ಮೇಲ್ವಿಚಾರಕಿ ಎಲ್.ಆರ್.ಶಿರಗುಪ್ಪಿ, ಚಿಕ್ಕಲಕಿ ಕ್ರಾಸ್ ವಲಯದ ಮೇಲ್ವಿಚಾರಕಿ ಸುನಂದಾ ಕಾಲತಿಪ್ಪಿ, ತೇರದಾಳ ವಲಯದ ಮೇಲ್ವಿಚಾರಕಿ ಕಮಲಾ ಕುರಣಿ, ಜೆ.ಎನ್.ಮಹಾಜನ, ಎಲ್.ಎಸ್.ಜಿಗಜಿನ್ನಿ, ಲಿಂಗನೂರ ವಲಯದ ಮೇಲ್ವಿಚಾರಕಿ ಎಂ.ಆರ್.ಮೇತ್ರಿ, ಎಸ್.ಎಲ್.ದೊಡಮನಿ, ಚಿಕ್ಕಪಡಸಲಗಿ ವಲಯದ ಮೇಲ್ವಿಚಾರಕಿ ಮುತ್ತವ್ವ ಹಿಪ್ಪರಗಿ ಇವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT