ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್: ಮಸಾಲೆ ಪದಾರ್ಥಗಳ ಬೆಲೆ ಹೆಚ್ಚಳ

Published 27 ಜೂನ್ 2023, 14:01 IST
Last Updated 27 ಜೂನ್ 2023, 14:01 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮಸಾಲೆ ವಸ್ತುಗಳ ಮತ್ತು ಸಿಹಿ ಪದಾರ್ಥ ತಯಾರಿಸಲು ಬೇಕಾದ ಒಣ ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕೇವಲ ನಿಮಿತ್ತವಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

‘ಇಲ್ಲಿನ ಮಂಗಳವಾರ ಪೇಟೆಯ ಗಾಂಧಿ ವೃತ್ತದ ಬಳಿ ಮಸಾಲೆ ವಸ್ತುಗಳನ್ನು ಮತ್ತು ಒಣ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು,

ಕೆ.ಜಿವೊಂದಕ್ಕೆ ಚಾರೋಲಿರೂ ₹900 ರಿಂದ ₹1,500, ಕ್ಯಾರಬೀಜ್ ₹750, ಜೀರಗಿ ₹450ರಿಂದ ₹750ಕ್ಕೆ, ಯಾಲಕ್ಕಿ ₹1,700, ಆಕ್ರೋಡ್ ₹1,100 ಮಾರಾಟವಾಗುತ್ತಿವೆ. ಬೆಲೆ ದುಬಾರಿಯಾಗಿದ್ದರಿಂದ ಜನರು ಈ ವಸ್ತುಗಳ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಬೆಲೆ ಹೆಚ್ಚಳದಿಂದ ವ್ಯಾಪಾರ ಅಷ್ಟಕ್ಕಷ್ಟೇ ನಡೆಯುತ್ತಿದೆ. ಕಡಿಮೆ ಪ್ರಮಾಣದಲ್ಲಿ ಜನ ಮಸಾಲೆ ವಸ್ತುಗಳನ್ನು ಹಾಗೂ ಒಣಹಣ್ಣುಗಳನ್ನು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ಮುಸ್ತಾಕ್ ಲೆಂಗ್ರೆ ಹೇಳಿದರು.

ಬಕ್ರೀದ್ ಹಬ್ಬಕ್ಕೆ ಇನ್ನೂ ಒಂದು ದಿನ ಮಾತ್ರ ಬಾಕಿ ಇದ್ದು, ಬುಧವಾರ ವ್ಯಾಪಾರ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT