ರಬಕವಿ ಬನಹಟ್ಟಿ: ಸಮೀಪದ ಕೃಷ್ಣಾ ನದಿಗೆ ನಿರ್ಮಾಣ ಮಾಡಲಾಗುತ್ತಿರುವ ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಿ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಸತ್ಯಾಗ್ರಹಿಗಳು ತಿಳಿಸಿದರು.

ಗುರುವಾರ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಕಾಮಾಗಾರಿಯನ್ನು ಪರಿಶೀಲನೆ ಮಾಡಿದರು.

ನಂತರ ಸೇತುವೆಯಿಂದ ಬಾಧಿತವಾಗುವ ಅಥಣಿ ತಾಲ್ಲೂಕಿನ ಮಹೀಷವಾಡಗಿ ರಬಕವಿ ಬನಹಟ್ಟಿ ತಾಲ್ಲೂಕಿನ ಮದನಮಟ್ಟಿ, ತೇರದಾಳ ತಾಲ್ಲೂಕಿನ ಹಳಿಂಗಳಿ, ತಮದಡ್ಡಿ ಗ್ರಾಮದ ರೈತರ ಸಮಸ್ಯೆಗಳನ್ನು ಆಲಿಸಿದರು.

ಅಲ್ಲಿಂದ ಸತ್ಯಾಗ್ರಹದ ವೇದಿಕೆಗೆ ಆಗಮಿಸಿದ ಸುಶೀಲಮ್ಮ ಮಾತನಾಡಿ, ‘ಸೇತುವೆಗೆ ಸಂಬಂಧಿಸಿದ ಮಹೀಷವಾಡಗಿ ಗ್ರಾಮದ ರೈತರ ಸಮಸ್ಯೆಯನ್ನು ಮೂರು ದಿನಗಳ ಒಳಗೆ ಹಾಗೂ ಮದನಮಟ್ಟಿ ಗ್ರಾಮದ ರೈತರ ಭೂಸ್ವಾಧೀನಕ್ಕೆ ಸಂಬಂಧಪಟ್ಟ ಕಾರ್ಯವನ್ನು ಹದಿನೈದು ದಿನಗಳ ಒಳಗೆ ಪರಿಹರಿಸುವುದಾಗಿ ತಿಳಿಸಿದರು. ಬರುವ ಸೋಮವಾರದಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟು ಕಾಮಾಗಾರಿಯನ್ನು ಕೈಗೊಳ್ಳಲಿದ್ದಾರೆ’ ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಸೇತುವೆಗೆ ಸಂಬಂಧಪಟ್ಟಂತೆ ಎರಡೂ ಬದಿಯ ರಸ್ತೆಯನ್ನು ಹೆಚ್ಚಿಸುವುದು ಮತ್ತು ಮಹೀಷವಾಡಗಿ ಮತ್ತು ಮದನಮಟ್ಟಿ ಗ್ರಾಮಗಳಲ್ಲಿ ಹೆಚ್ಚುವರಿ ಕಮಾನುಗಳನ್ನು ನಿಲ್ಲಿಸಲು ಪ್ರಸ್ತಾವನೆನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸುಶೀಲಮ್ಮ ತಿಳಿಸಿದರು. ನಂತರ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದರು.

ರಬಕವಿ ನಗರದ ಮುಖಂಡ ನೀಲಕಂಠ ಮುತ್ತೂರ ಮಾತನಾಡಿ, ‘ಈಗಾಗಲೇ ಸಚಿವರು ನಮಗೆ ಡಿಸೆಂಬರ್ ಒಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದರು. ಆದರೆ ಇದುವರೆಗೆ ಶೇ 5ರಷ್ಟು ಕಾಮಗಾರಿ ನಡೆಯದೇ ಇರುವುದು ವಿಷಾದನೀಯ ಸಂಗತಿಯಾಗಿದೆ’ ಎಂದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ‘ಡಾ. ಜಮಖಂಡಿ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಬೆಂಬಲವಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತ್ವರಿತ ಕಾಮಗಾರಿಯನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ಗುರುವಾರ ಬನಹಟ್ಟಿ ನಗರದ ರಾಜಶೇಖರ ಸೋರಗಾವಿ ಮತ್ತು ಮಹಾದೇವ ಬಾಪೂರೆ ಕೂಡ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರು.

ಸತ್ಯಾಗ್ರಹ ಸ್ಥಳಕ್ಕೆ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ, ವಿರಕ್ತಮಠದ ಗುರುಮಹಾಂತ ಸ್ವಾಮೀಜಿ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಸತೀಷ ಹಜಾರೆ, ಬಾಬಾಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಗಣಪತರಾವ ಹಜಾರೆ, ಮಹಾದೇವ ಧೂಪದಾಳ, ಸಂಜಯ ತೆಗ್ಗಿ, ಭೀಮಶಿ ಪಾಟೀಲ, ಭೀಮಶಿ ಮಗದುಮ್, ರಾಮಣ್ಣ ಹುಲಕುಂದ, ಪ್ರಶಾಂತ ಕೊಳಕಿ, ಸಂಜಯ ಜೋತಾವರ, ಶಂಕರ ಕೆಸರಗೊಪ್ಪ,ಅಶೋಕ ಮುಗ್ಗನವರ, ಸ್ವನ್ಪಿಲ್ ದೇಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.