ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಬಕವಿ ಬನಹಟ್ಟಿ: ಕಸದ ತೊಟ್ಟಿಯಾದ ರಸ್ತೆ ಡಿವೈಡರ್

ರಬಕವಿಯ ಹೊರ ವಲಯದ ರಸ್ತೆಯಲ್ಲಿ ಡಿವೈಡರ್‌ಗಳ ನಿರ್ಮಾಣ
ವಿಶ್ವಜ ಕಾಡದೇವರ
Published 12 ಫೆಬ್ರುವರಿ 2024, 5:00 IST
Last Updated 12 ಫೆಬ್ರುವರಿ 2024, 5:00 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರ ಸೌಂದರ್ಯೀಕರಣಕ್ಕಾಗಿ  ರಬಕವಿ ಮತ್ತು ಬನಹಟ್ಟಿ ಹೊರ ವಲಯದಲ್ಲಿ ರಸ್ತೆ ಡಿವೈಡರ್ ನಿರ್ಮಾಣ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಕೆಲವು ಕಡೆ ಡಿವೈಡರ್ ಕಸದ ತೊಟ್ಟಿಯಾಗಿದೆ. ದಿನನಿತ್ಯ ಸಂಚರಿಸುವು ಪ್ರಯಾಣಿಕರು ಗಬ್ಬು ವಾಸನೆಯನ್ನು ಪಡೆದುಕೊಳ್ಳುವಂತಾಗಿದೆ. 

ರಬಕವಿಯ ಹೊರ ವಲಯದ ಮಹಾಲಿಂಗಪುರ ರಸ್ತೆ, ತೇರದಾಳ ರಸ್ತೆಯಲ್ಲಿ ಡಿವೈಡರ್ ಗಳನ್ನು ನಿರ್ಮಾಣ ಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಜನರಿಗೆ ಅನುಕೂಲ ಕೂಡಾ ಆಗಿದೆ. ಆದರೆ ಬನಹಟ್ಟಿಯ ವೈಭವ ಚಲನಚಿತ್ರ ಮಂದಿರದಿಂದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಬಸವೇಶ್ವರ ಸಮುದಾಯ ಭವನದವರೆಗೆ ರಸ್ತೆ ಡಿವೈಡರ್ ಅಭಿವೃದ್ದಿಯಾಗಿಲ್ಲ. ಈ ಮೂರು ಯೋಜನೆಗಳ ಒಟ್ಟು ಮೊತ್ತ ₹5 ಕೋಟಿಯದ್ದಾಗಿದೆ.

ಈ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ. ಪ್ರಯಾಣಿಕರಿಗೆ ಹೂವಿನ ಸುಗಂಧವನ್ನು ಮತ್ತು ಸಂಜೆಯಾಗುತ್ತಿದ್ದಂತೆ ಬೆಳಕಿನ ವ್ಯವಸ್ಥೆಯನ್ನು ನೀಡಬೇಕಾದ ಡಿವೈಡರ್ ಈಗ ಕಸದ ತೊಟ್ಟಿಯಾಗಿದೆ. ಈ ಡಿವೈಡರ್ ರಸ್ತೆ ನಗರದ ಹೊರ ವಲಯದಲ್ಲಿದ್ದು, ಸುತ್ತ ಮುತ್ತಲಿನ ಮನೆಯವರು, ಅಂಗಡಿಕಾರರು, ತಮ್ಮಲ್ಲಿರುವ ಬೇಡವಾದ ವಸ್ತುಗಳನ್ನು ಡಿವೈಡರ್ ಮಧ್ಯದಲ್ಲಿ ಹಾಕುತ್ತಿದ್ದಾರೆ. ಕೆಲವರು ಮನೆಯಲ್ಲಿಯ ಬಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ಹಾಕಿದ್ದು, ಕಸದ ತೊಟ್ಟಿಯಂತಾಗಿದೆ.

ನೂಲಿನ ಗಿರಣಿಯಿಂದ ಬಸವೇಶ್ವರ ಸಮುದಾಯ ಭವನದವರೆಗೆ ಬೀದಿ ದೀಪಗಳೇ ಇಲ್ಲದಂತಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಗಣೇಶ ದೇವಸ್ಥಾನ, ಸಾಯಿಬಾಬ ಮಂದಿರ ಮತ್ತು ಜೇಡರ ದಾಸಿಮಯ್ಯ ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ, ಸಂಜೆ ಮತ್ತು ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುವ ಬಹಳಷ್ಟು ಜನರಿಗೆ ತೊಂದರೆಯಾಗಿದೆ.

ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಆದಷ್ಟು ಬೇಗನೆ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರಾದ ಶಾನೂರ ಮಳಲಿ, ಅಯೂಬ ಮಳಲಿ, ಲತೀಪ್ ಮಹಾಲಿಂಗಪುರ, ಆಶ್ರಫ್ ಮಹಾಲಿಂಗಪುರ, ಶಶಿಕಾಂತ ಹಾಸೀಲಕರ, ಬಸವರಾಜ ಹಟ್ಟಿ, ಲಾಲಸಾಬ್ ಮುಲ್ಲಾ ಆಗ್ರಹಿಸಿದ್ದಾರೆ.

₹5 ಕೋಟಿ ಮೊತ್ತದ ಯೋಜನೆ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ ಪ್ರಯಾಣಿಕರಿಗೆ ಗಬ್ಬು ವಾಸನೆ 

ವಿದ್ಯುತ್ ದೀಪಗಳನ್ನು ಅಳವಡಿಸುವ ನಿಟ್ಟಿನಲ್ಲಿ ಗಮನ ನೀಡಲಾಗುವುದು. ನಗರ ಸೌಂದರ್ಯಕ್ಕೆ ಆದ್ಯತೆ ನೀಡಲಾಗುವುದು. ಡಿವೈಡರ್‌ನಲ್ಲಿ ಕಸ ಹಾಕದಂತೆ ಅರಿವು ಮೂಡಿಸಲಾಗುವುದು ಜಗದೀಶ ಈಟಿ ಪೌರಾಯುಕ್ತ - ರಬಕವಿ ಬನಹಟ್ಟಿ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT