ರಾಂಪುರ ಬಸ್ ನಿಲ್ದಾಣಕ್ಕೆ ಪುನರವಸತಿ ಇಲಾಖೆ ನೀಡಿದ ನಿವೇಶನ
ಜಿ.ಪಂ. ಸಿಇಒಗೆ ಪತ್ರ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರವಸತಿ ಇಲಾಖೆಯವರು ಬಸ್ ನಿಲ್ದಾಣಕ್ಕೆ ನಿವೇಶನ ಹಸ್ತಾಂತರಿಸುವ ಪೂರ್ವದಲ್ಲಿ ಈ ಜಾಗೆ ಒತ್ತುವಾರಿಯಾಗಿದ್ದರೆ ಅದನ್ನು ತೆರವು ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ನಿರ್ದೇಶನ ಕೊಟ್ಟಿದ್ದಾರೆ. ಅದರ ಪ್ರಕಾರ ಅವರು ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಸಮಸ್ಯೆ ಹಾಗೆಯೇ ಮುಂದುವರೆದಿದೆ. ಈ ಬಗ್ಗೆ ನಾವು ಜಿ.ಪಂ. ಸಿಇಒ ಅವರಿಗೆ ಪತ್ರ ಬರೆದಿದ್ದೇವೆ
ಕೆಎಸ್‌ಆರ್‌ಟಿಸಿಗೆ ಮಾತ್ರ ತೆರವು ಅಧಿಕಾರ ನಿವೇಶನ ಹಸ್ತಾಂತರಿಸುವಾಗ ಪುನರ್ವಸತಿ ಇಲಾಖೆ ಗ್ರಾಮ ಪಂಚಾಯಿತಿಗೆ ಯಾವುದೇ ನಿರ್ದೇಶನ ನೀಡಿಲ್ಲ. ಜಾಗೆಯ ಮಾಲೀಕತ್ವ ಕೆಎಸ್‌ಆರ್‌ಟಿಸಿಗೆ ಇರುವುದರಿಂದ ಒತ್ತುವರಿ ತೆರವು ಅವರೇ ಮಾಡಿಸಬೇಕು. ಬೇಕಾದರೆ ನಾವು ಸಹಕಾರ ನೀಡುತ್ತೇವೆ. ಅದು ಬಿಟ್ಟು ನಾವು ತೆರವುಗೊಳಿಸಬೇಕು ಎನ್ನುವುದು ಸರಿಯಲ್ಲ