ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಸಮ್ಮೇಳನ ಅಧ್ಯಕ್ಷರಾಗಿ ಸಹಜಾನಂದಶ್ರೀ ಆಯ್ಕೆ

Published 27 ಫೆಬ್ರುವರಿ 2024, 14:46 IST
Last Updated 27 ಫೆಬ್ರುವರಿ 2024, 14:46 IST
ಅಕ್ಷರ ಗಾತ್ರ

ಜಮಖಂಡಿ: ಮಾರ್ಚ್ 17 ರಂದು ನಡೆಯುವ ಜಮಖಂಡಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಲ್ಲಿನ ರುದ್ರವಾಧೂತ ಮಠದ ಸಹಜಾನಂದ ಅವಧೂತ ಶ್ರೀಗಳು ಆಯ್ಕೆಯಾಗಿದ್ದಾರೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಭೆ ನಡೆಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿದ ಬಳಿಕ ಪದಾಧಿಕಾರಿಗಳೊಂದಿಗೆ ಶಾಸಕ ಜಗದೀಶ ಗುಡಗುಂಟಿ ಅವರ ನಿವಾಸಕ್ಕೆ ತೆರಳಿ, ಅಧಿಕೃತ ಆಹ್ವಾನ ನೀಡಿ ಸರ್ವಾಧ್ಯಕ್ಷರನ್ನು ಗೌರವಿಸಿದರು.

ಉಮೇಶ ಶಿದರಡ್ಡಿ, ಗೌರವ ಕಾರ್ಯದರ್ಶಿ ವಿನೋದ ಲೋಣಿ, ಕೃಷ್ಣಾನಂದ ಅವಧೂತರು, ನಿಕಟಪೂರ್ವ ಅಧ್ಯಕ್ಷ ಪ್ರೊ.ಬಸವರಾಜ ಕಡ್ಡಿ, ಸಂಗಮೇಶ ಮಟೋಳಿ, ಮೃತ್ಯುಂಜಯ ಗವಿಮಠ, ಟಿ.ಪಿ. ಗಿರಡ್ಡಿ, ಪಿ.ಆರ್. ರಾಮತಾಳ, ರುದ್ರಗೌಡ ಪಾಟೀಲ, ಬಿ.ಎನ್. ಅಸ್ಕಿ, ವಕೀಲ ಎನ್.ಬಿ. ಗಸ್ತಿ, ಪ್ರಶಾಂತ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT